ಮೋದಿ ಅಧಿಕಾರಕ್ಕೆ ಬಂದ್ರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತೆ! ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ವಿಶ್ವಾಸ !!

1145
9900071610

ಮೋದಿ ಮತ್ತೊಮ್ಮೆ ಎಂಬ ಘೋಷಣೆಯೊಂದಿಗೆ ದೇಶದಾದ್ಯಂತ ಕಣಕ್ಕಿಳಿದಿರುವ ಬಿಜೆಪಿಗರಿಗೆ ದೇಶದ ಗಡಿದಾಟಿಯೂ ಬೆಂಬಲ ವ್ಯಕ್ತವಾಗಿದೆ. ಹೌದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಅಭಿಮಾನಿಗಳ ಮಾತಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್​​ ಖಾನ್​ ಕೂಡ ಬೆಂಬಲ ಸೂಚಿಸಿದ್ದಾರೆ. ಇಮ್ರಾನ್​ ಖಾನ್​ ಈ ಆಶಯ ಇದೀಗ ದೊಡ್ಡ ಚರ್ಚೆ ಹುಟ್ಟುಹಾಕಿದೆ.

ad


ಲೋಕಸಭೆ ಚುನಾವಣೆ ದಿನಗಣನೆ ನಡೆದಿದ್ದು, ದೇಶದಲ್ಲಿ ಮೋದಿ ಅಲೆಯನ್ನು ಮತ್ತೊಮ್ಮೆ ಸೃಷ್ಟಿಸಲು ಬಿಜೆಪಿಗರು ಸರ್ಕಸ್​ ಆರಂಭಿಸಿದ್ದಾರೆ. ಈ ಹೊತ್ತಲ್ಲೇ ಪ್ರಧಾನಿ ಮೋದಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ಈ ಭಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ್ರೆ ಜಮ್ಮು ಕಾಶ್ಮೀರ ಸಮಸ್ಯೆ ಬಗೆಹರಿಯುತ್ತೆ. ಉಭಯ ದೇಶಗಳ ನಡುವಿನ ಮಾತುಕತೆ ಸರಳವಾಗುತ್ತೆ ಅಂತ ಇಮ್ರಾನ್​​​ ಖಾನ್​​ ಅಭಿಪ್ರಾಯಿಸಿದ್ದಾರೆ.

ಪಾಕ್​ ಮಾಧ್ಯಮವೊಂದರ ಸಂದರ್ಶನದ ವೇಳೆ ಇಮ್ರಾನ್​​ ಖಾನ್ ಈ ಮಾತು ​ಹೇಳಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಭಾರತ ಪಾಕಿಸ್ತಾನ ನಡುವೆ ಬಾಂಧವ್ಯ ಗಟ್ಟಿಕೊಳ್ಳುತ್ತದೆ. ಎರಡು ದೇಶಗಳ ನಡುವೆ ಇದ್ದ ಸಮಸ್ಯೆ ಬೇಗ ಬಗೆಹರಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಅಲ್ಲದೆ ಕಾಂಗ್ರೆಸ್​ ಸರ್ಕಾರ ಬಂದ್ರೆ ಈ ಉಭಯ ದೇಶಗಳ ನಡುವೆ ಮಾತುಕತೆ ಸರಳವಾಗಲ್ಲ ಅಂತ ಇಮ್ರಾನ್ ಖಾನ್ ಹೇಳಿದ್ದಾರೆ. ಪುಲ್ವಾಮಾ ದಾಳಿ ಸೇರಿದಂತೆ ಬೇರೆ-ಬೇರೆ ಸಂದರ್ಭದಲ್ಲಿ ಕಾಂಗ್ರೆಸ್​ ಪಾಕಿಸ್ತಾನದ ಪರ ಮೃದು ಧೋರಣೆ ತಾಳಿತ್ತು. ಹೀಗಿದ್ದರೂ ಇಮ್ರಾನ್​​ ಖಾನ್​ ಪ್ರಧಾನಿ ನರೇಂದ್ರ ಮೋದಿ ಬೆಂಬಲಿಸಿ ಬಹಿರಂಗವಾಗಿ ಹೇಳಿಕ ನೀಡಿರುವುದು ಕಾಂಗ್ರೆಸ್​ಗೆ ತೀವ್ರ ಮುಖಭಂಗವಾದಂತಾಗಿದೆ.

Sponsored :


9900071610