ಹೊಸ ಚಿತ್ರಕ್ಕಾಗಿ ನಗ್ನರಾಗಿ ಪೋಸು ಕೊಟ್ಟ ನಟಿ! ಹೆಬ್ಬುಲಿ ಸುಂದರಿಯ ಹೊಸ ಅವತಾರಕ್ಕೆ ಕಾಲಿವುಡ್​ ಕಂಗಾಲು!!

5340

ಕೆಲವೊಂದು ನಟಿಯರು ಕಾಂಟ್ರೋವರ್ಸಿಯಿಂದಲೇ ಸುದ್ದಿಯಾಗುತ್ತಾರೆ. ಈ ಸಾಲಿಗೆ ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಕೂಡ ಸೇರುತ್ತಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲು ಬೋಲ್ಡ್ ಆಗಿರುವ ನಿರ್ಧಾರವನ್ನೇ ತೆಗೆದುಕೊಳ್ಳುವ ಅಮಲಾ ಪೌಲ್​ ಈ ಬಾರಿ ಒಂದು ಹೆಜ್ಜೆ ಮುಂದೇ ಹೋಗಿದ್ದು, ತಮ್ಮ ಹೊಸ ಚಿತ್ರಕ್ಕಾಗಿ ಸಂಪೂರ್ಣ ನಗ್ನರಾಗಿ ಕಾಣಿಸಿಕೊಳ್ಳುವ ಮೂಲಕ ಕಾಲಿವುಡ್​ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಹೌದು ಈ ಬಾರಿ ಅಮಲಾ ಪೌಲ್​  ಎಲ್ಲ ಇತಿ-ಮಿತಿಗಳನ್ನು ದಾಟಿ  ಸಿನಿಮಾ ಇಂಡಸ್ಟ್ರಿಯಲ್ಲೇ ಯಾರು ಮಾಡದ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನು ಅಂದ್ರಾ, ಇಷ್ಟು ದಿನ ಎಕ್ಸ್​ಪೋಸ್​​ಗೆ ಸೀಮಿತವಾಗಿದ್ದ ಅಮಲಾ ಪೌಲ್ ಈ ಬಾರಿ ತಮ್ಮ ಹೊಸ ಅಭಿನಯದ ತಮಿಳಿನ ಹೊಸ  ಚಿತ್ರ ಅಡೈಗಾಗಿ ಸಂಪೂರ್ಣ ನಗ್ನರಾಗಿದ್ದಾರೆ. ಅಮಲಾ ಪೌಲ್​ ನಗ್ನರಾಗಿರುವ ಟೀಸರ್​ ಬಿಡುಗಡೆಯಾಗಿದ್ದು, ಟೀಸರ್​ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ad

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಮಲಾಪೌಲ್ ಅಡೈ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಇದೀಗ ಸೆನ್ಸಾರ್ ಬೋರ್ಡ್ ‘ಎ’ ಸರ್ಟಿಫಿಕೇಟ್ ಕೊಟ್ಟಿದೆ.

ಎಂ ರತ್ನಂ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಡೈ ಚಿತ್ರ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರ್ತಿದೆ. ಚಿತ್ರದಲ್ಲಿ ಅಮಲಾ ಪೌಲ್ ನಗ್ನವಾಗಿ ಕಾಣಿಸಿಕೊಂಡಿದ್ದು ದಿನದಿಂದ ದಿನಕ್ಕೆ ಈ ಚತ್ರದ ಕುರಿತು ಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗುತ್ತಲೇ ಇದೆ

 

Sponsored :

Related Articles