ನಲ್ಲಿ ತಿರುವಿದ್ರೇ ಬರ್ತಿದೆ ರಕ್ತ! ಧಾರವಾಡದಲ್ಲೊಂದು ವಿಚಿತ್ರ ಘಟನೆ!!

2407

ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದ್ರೆ ನೀರು ಬರುತ್ತೆ. ಆದ್ರೆ ಧಾರವಾಡದ ಗೊಲ್ಲರ ಹಾಗೂ ಹೂಗಾರ ಕಾಲೋನಿಯ ಜನ್ರು ನಲ್ಲಿಯನ್ನ ತಿರುವಿದ್ರೆ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬರುತ್ತಿದೆ. ಇದರಿಂದ ಗಾಭರಿಗೋಡಿರುವ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ.

ad

ಇದಕ್ಕೆ ಪ್ರಮುಖ ಕಾರಣವೆಂದರೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿಖಾನೆ ಹಾಗೂ ಮೀನು ಮಾರುಕಟ್ಟೆ, ಇವುಗಳು ಗಲೀಜು ನೀರನ್ನು ಹೊರಬಿಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಭೂಮಿ ವಾಸಿಸುವ ಪ್ರತಿ ಮನುಷ್ಯ, ಪ್ರಾಣಿ ಹಾಗೂ ಸಸ್ಯಸಂಕುಲಕ್ಕೆ ನೀರು ಪ್ರಮುಖ ಮೂಲಭೂತ ಅಗತ್ಯತೆಗಳಲ್ಲೊಂದು ಆದ್ದರಿಂದ ಪಾಲಿಕೆ ಹಾಗೂ ಜಲ ಮಂಡಳಿಯು ಕೂಡಲೆ ಹೆಚ್ಚೆತ್ತು ಇನ್ನಾದರು ಈ ಸಮಸ್ಯೆಗೆ ತಿಲಾಂಜಲಿಯನ್ನೆಡಬೇಕು ಎನ್ನುವುದೆ ನಮ್ಮ ಆಶಯ

Sponsored :

Related Articles