ಗಾಯದ ಸಮಸ್ಯೆ ಟೀಂ ಇಂಡಿಯಾ ಕೈ ತಪ್ಪಿದ ಶಿಖರ್ ಧವನ್! ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್​​​!!

1908
9900071610

ಐಸಿಸಿ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಭಾರೀ ಆಘಾತವಾಗಿದೆ. ಟೀಂ ಇಂಡಿಯಾದ ಗಬ್ಬರ್ ಎಂದೇ ಪ್ರಸಿದ್ಧವಾಗಿರುವ ​ಶಿಖರ್​​ ಧವನ್​​ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದು ಟೀಂ ಇಂಡಿಯಾ ಮಾತ್ರವಲ್ಲ ಭಾರತೀಯ ಕ್ರಿಕೆಟ್​ ಪ್ರಿಯರ ಪಾಲಿಗೂ ಶಾಕ್​ ನೀಡಿದೆ.

ad

ಆಸ್ಟ್ರೇಲಿಯಾ ಹಾಗೂ ಇಂಡಿಯಾದ ನಡುವೆ ನಡೆದ ಪಂದ್ಯದ ವೇಳೆ ಟೀಂ ಇಂಡಿಯಾದ ಬ್ಯಾಟ್ಸ್​ಮನ್​​ ಶಿಖರ್​ ಧವನ್​​ ಎಡಗೈನ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದು, ವೈದ್ಯರು ಶಿಖರ್ ಧವನ್ ಗೆ 3 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶಿಖರ್ ಧವನ್ ವಿಶ್ವಕಪ್​​ನಿಂದಲೇ ಔಟ್ ಆಗುವ ಸಾಧ್ಯತೆಗಳಿವೆ.

ಐಸಿಸಿ 2019ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಈ ಹಿಂದೆ ಶಿಖರ್ ಅಮೋಘ ಶತಕ ಸಿಡಿಸಿದ್ದರು. ಆದರೀಗಾ ಎಡಗೈ ಹೆಬ್ಬೆರಳಿಗೆ ಗಾಯವಾಗಿರುವುದರಿಂದ ವೈದ್ಯರು ಕಡ್ಡಾಯವಾಗಿ 3 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಮೂರು ವಾರಗಳಲ್ಲಿ ಬಹುತೇಕ ಪಂದ್ಯಗಳು ಮುಗಿಯಲಿರೋದರಿಂದ ಶಿಖರ್ ಧವನ್​ ಇಲ್ಲದೇ ಇಂಡಿಯಾಕ್ಕೆ ಸಂಕಷ್ಟ ಎದುರಾದಂತಾಗಿದೆ.

ಶಿಖರ್ ಟೀಂ ಇಂಡಿಯಾದ ಓಪನಿಂಗ್ ಬ್ಯಾಟ್ಸ್​ಮನ್​​ ಆಗಿದ್ದು, ತಂಡದಿಂದ ಹೊರನಡೆದರೆ ಇದು ಟೀಂ ಇಂಡಿಯಾಗೆ ತುಂಬಾಲಾರದ ನಷ್ಟ. ಅದರಲ್ಲೂ ಜೂನ್ 13 ಗುರುವಾರದಂದು ಇಂಡಿಯಾ ಹಾಗೂ ನ್ಯೂಜಿಲ್ಯಾಂಡ್ ಪಂದ್ಯವಿದ್ದು, ನಂತರ ಜೂನ್ 16 ಭಾನುವಾರ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯವಿದೆ. ಈ ಎರಡು ಮಹತ್ವದ ಪಂದ್ಯಗಳಲ್ಲಿ ಶಿಖರ್ ಧವನ್​ ಅನುಪಸ್ಥಿತಿ  ಟೀಂ ಇಂಡಿಯಾಗೆ ನಷ್ಟ ತರಲಿದೆ.

ಇನ್ನು ಮೂರು ವಾರಗಳ ಶಿಖರ್ ಧವನ್  ಪಂದ್ಯಗಳಿಂದ ಹೊರಗುಳಿಯರೋದರಿಂದ ಅವರ ಬದಲಾಗಿ ಬೇರೆ ಆಟಗಾರ ಆಯ್ಕೆಮಾಡುವ ಸಾಧ್ಯತೆಗಳಿವೆ. ಜೊತೆಗೆ ಶಿಖರ್ ಪಂದ್ಯದಿಂದ ದೂರಸರಿದರೇ ಇಂಡಿಯಾ ತಂಡ ಅದ್ಬುತ ಓಪನಿಂಗ್ ಬ್ಯಾಟ್ಸ್​ಮನ್ ಕಳೆದುಕೊಂಡಂತಾಗುತ್ತದೆ.​​

ದೇಶದಾದಾದ್ಯಂತ ಶಿಖರ್ ಧವನ್​ ಗಾಯದ ಸಮಸ್ಯೆ ಚರ್ಚೆಗೀಡಾಗುತ್ತಿದ್ದು,  3 ವಾರಗಳ ವಿಶ್ರಾಂತಿ ಪಡೆಯುವಷ್ಟರಲ್ಲಿ ವಿಶ್ವಕಪ್ ಪಂದ್ಯವೇ ಮುಕ್ತಾಯವಾಗುತ್ತದೆ ಎಂದು ಶಿಖರ್ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ಧಾರೆ.

Sponsored :


9900071610