ದಸರಾ ಮುಗಿದ ಮೇಲೆ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ…!ಬಿಜೆಪಿ ಸರ್ಕಾರಕ್ಕೆ ಗಡುವು ನೀಡಿದ ಅನರ್ಹ ಶಾಸಕರು…!

2739

ಅನರ್ಹ ಶಾಸಕರು ಇಂದು ಬೆಂಗಳೂರಿನಲ್ಲಿ ದಿಢೀರ್ ಸಭೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಅನರ್ಹ ಶಾಸಕರು ನಮ್ಮ ಸಮಸ್ಯೆ ಇತ್ಯರ್ಥವಾಗದೇ ಇದ್ದರೇ ನಮ್ಮ ದಾರಿ ನಮಗೆ ಎಂದು ಗಡುವು ನೀಡಿದ್ದಾರೆ.

ad

ಬೆಂಗಳೂರಿನ ಬ್ರಿಗೇಡ್ ಪ್ಯಾಲೇಸ್​ ರಸ್ತೆಯಲ್ಲಿರುವ ಅನರ್ಹ ಡಾ. ಸುಧಾಕರ್ ಮನೆಯಲ್ಲಿ ಸಭೆ ಸೇರಿದ ಅನರ್ಹ ಶಾಸಕರಾದ ಮುನಿರತ್ನ, ರೋಷನ್ ಬೇಗ್, ಎಂಟಿಬಿ ನಾಗರಾಜ್, ಬಿ.ಸಿ.ಪಾಟೀಲ್ ಮತ್ತಿತರರು ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ನಡೆಸಿದರು. ರಾಜ್ಯ ಮೈತ್ರಿ ಸರ್ಕಾರವನ್ನು ಉರುಳಿಸುವ ಸಂದರ್ಭದಲ್ಲಿ ವಿಶೇಷ ವಿಮಾನ ಕೊಟ್ಟಿದ್ದೇನು? ದಿನಕ್ಕೆ 25 ಬಾರಿ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದೇನು? ಸರ್ಕಾರ ಬಿದ್ದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಈಗ ಕ್ಯಾರೇ ಮಾಡುತ್ತಿಲ್ಲ ಎಂಬ ಪರಿಸ್ಥಿತಿ ಎದುರಾಗಿದ್ದು, ಮುಂದಿನ ರಾಜಕೀಯ ನಡೆ ಏನಿರಬೇಕು ಎಂದು ಚರ್ಚೆ ನಡೆಸಿದರು.


ಆಫರೇಶನ್​ ಕಮಲ ಮಾಡಿ ಮೈತ್ರಿ ಸರ್ಕಾರ ಉರುಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಸಚಿವ ಸ್ಥಾನ, ನಿಗಮ ಮಂಡಳಿ ಹುದ್ದೆ, ಅನುದಾನ,ವರ್ಗಾವಣೆ ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿತ್ತು. ಯಾವುದು ಕೂಡ ಈಡೇರಿಲ್ಲ. ಒಂದೆಡೆ ಶಾಸಕರು ಅಲ್ಲ, ಮತ್ತೊಂದೆಡೆ ಹುದ್ದೆ, ಅಧಿಕಾರಿಗಳು ಇಲ್ಲ ಎನ್ನುವ ಆತಂಕವನ್ನು ಅನರ್ಹ ಶಾಸಕರು ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರಚನೆಯಾಗಿ ಸಚಿವರು , ಉಪಮುಖ್ಯಮಂತ್ರಿಗಳ ನೇಮಕವಾಗಿದೆ. ಬಿಜೆಪಿಗರು ನಮ್ಮಿಂದಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ನಾವು ಇರೋ ರಾಜಕೀಯ ಅಧಿಕಾರವನ್ನು ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಇನ್ನು ಕಾಯಲು ಸಾಧ್ಯವಿಲ್ಲ. ದಸರಾ ಮುಗಿಯವುದರೊಳಗೆ ನಮ್ಮ ರಾಜಕೀಯ ಸ್ಥಿತಿ ಸರಿಯಾಗದಿದ್ದರೇ ನಾವು ಮುಂದಿನ ದಾರಿ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

 

ಸಭೆ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್ ಮತ್ತು ಎಂಟಿಬಿ ನಾಗರಾಜ್, ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ. ಆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.

Sponsored :

Related Articles