ತೀವ್ರಗೊಂಡ ಮನ್ಸೂರ್ ವಿಚಾರಣೆ! 303 ಕೆಜಿ ನಕಲಿ ಚಿನ್ನದ ಬಿಸ್ಕೆಟ್​ ವಶಪಡಿಸಿಕೊಂಡ ತನಿಖಾತಂಡ!!

1318
9900071610

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಇಲ್ಲಿವರೆಗೂ ಮನ್ಸೂರ್ ಬಳಿ ಅಷ್ಟು ಚಿನ್ನ ಇದೆ ಇಷ್ಟು ಚಿನ್ನ ಇದೆ ಎನ್ನಲಾಗುತ್ತಿತ್ತು. ಆದ್ರೆ ಈಗ ಮನ್ಸೂರ್ ಖಾನ್ ಬಳಿ ಕಿಲೋ ಗಟ್ಟಲೆ ನಕಲಿ ಚಿನ್ನ ಇರುವುದು ಪತ್ತೆಯಾಗಿದೆ. ಹೌದು ಇ.ಡಿ ಕಸ್ಟಡಿಯಿಂದ ತಮ್ಮ ವಶಕ್ಕೆ ಪಡೆದಿರುವ ಎಸ್ ಐಟಿ ಮನ್ಸೂರ್ ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಮನ್ಸೂರ್ ಬಳಿ ೩೦೩ ಕೆಜಿಯಷ್ಟು ೫೮೮೦ ಬಿಸ್ಕೆಟ್ ರೂಪದ ನಕಲಿ ಬಂಗಾರ ಇರುವುದು ಪತ್ತೆಯಾಗಿದ್ದು ಸದ್ಯ ಅಷ್ಟನ್ನು ಎಸ್ ಐ ಟಿ ವಶಕ್ಕೆ ಪಡೆದಿದೆ.

ad

ಹೂಡಿಕೆದಾರರಿಗೆ ಇದೆ ನಕಲಿ ಬಂಗಾರವನ್ನ ತೋರಿಸುವ ಮೂಲಕ ಮನ್ಸೂರ್ ಹೂಡಿಕೆ ಮಾಡಲು ಪ್ರೇರೆಪಿಸುತ್ತಿದ್ದ. ನೀವು ಹೂಡಿಕೆ ಮಾಡುವ ಹಣವನ್ನ ಚಿನ್ನದ ರೂಪದಲ್ಲಿ ಇಡಲಾಗುತ್ತೆ ನಿಮ್ಮ ಹಣಕ್ಕೆ ಈ ಚಿನ್ನವೇ ಗ್ಯಾರಂಟಿ ಅಂತಾ ನಂಬಿಸುತ್ತಿದ್ದದ್ದು ಬೆಳಕಿಗೆ ಬಂದಿದೆ.


ಆರೋಪಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದ ಎಸ್ ಐ ಟಿ ಖಚಿತ ಮಾಹಿತಿ ಪಡೆದು ಇಂದು ರಿಚ್ಮಂಡ್ ಟೌನ್ ಬಳಿಯ ಅಪಾರ್ಟ್ ಮೆಂಟ್ ನ ಸ್ವಿಮ್ಮಿಂಗ್ ಪೂಲ್ ತಳದಲ್ಲಿ ಅಡಗಿಸಿಟ್ಟಿದ್ದ ನಕಲಿ ಚಿನ್ನವನ್ನ ವಶಕ್ಕೆ ಪಡೆದಿದ್ದು ಸದ್ಯ ತನಿಖೆ ಮುಂದುವರೆದಿದೆ. ಈ ಅಪಾರ್ಟ್ಮೆಂಟ್ ಮಾಜಿ ಸಚಿವ ಜಮೀರ್ ಅಹ್ಮದ್​ ಸೇರಿದ್ದಾಗಿದ್ದು, ಬಳಿಕ ಜಮೀರ್ ಅದನ್ನು ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

 

Sponsored :


9900071610