ಐಪಿಎಸ್​​ ಅಧಿಕಾರಿ ಮನೆಯಲ್ಲಿ 1 ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆ! ಬೆಚ್ಚಿಬಿದ್ದ ನಾರ್ಕೋಟಿಕ್ಸ್​​ ಕಂಟ್ರೋಲ್​ ಬ್ಯುರೋ ಅಧಿಕಾರಿಗಳು!!

633

ಐಪಿಎಸ್​ ಅಧಿಕಾರಿ ಒಡೆತನದ ಮನೆಯಲ್ಲಿ ಒಂದು ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾದ ಘಟನೆ ನವದೆಹಲಿಯ ಗ್ರೇಟರ್ ನೋಯಿಡಾ ಪ್ರದೇಶದಲ್ಲಿ ನಡೆದಿದೆ. ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯುರೋದವರು ನಡೆಸಿದ ದಾಳಿ ವೇಳೆ ಅಂದಾಜು 1.818 ಕೆಜಿ ಸ್ಯುಡೋಫೆಡ್ರೈನ್​ ಮಾದಕ ದ್ರವ್ಯ ಪತ್ತೆಯಾಗಿದ್ದು, ಐಪಿಎಸ್​ ಅಧಿಕಾರಿ ಮನೆಯಲ್ಲಿ ಪತ್ತೆಯಾದ ಮಾದಕದ್ರವ್ಯ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿದೆ.

ad

ಇತ್ತೀಚಿಗೆ ದೆಹಲಿ ಪೊಲೀಸರು, ಇಂಧಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಿ ಆಕೆಯಿಂದ 24.7 ಕೆಜಿ ಸ್ಯೂಡೋಫೆಡ್ರೈನ್​​ ವಶಪಡಿಸಿಕೊಂಡಿದ್ದರು. ಆಕೆ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು 1 ಕೋಟಿ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.


ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಲಖನೌದಲ್ಲಿ ಐಪಿಎಸ್​ ಅಧಿಕಾರಿಯಾಗಿರುವ ದೇವೇಂದ್ರ ಪಿಎನ್ ಪಾಂಡೆ ಎಂಬುವವರಿಗೆ ಸೇರಿದ್ದಾಗಿದ್ದು ಅವರಿಂದ ಬಾಡಿಗೆ ಪಡೆದ ನೈಜಿರಿಯಾ ಪ್ರಜೆಗಳು ಮಾದಕದ್ರವ್ಯ ಸಂಗ್ರಹ ಹಾಗೂ ಸಾಗಣೆಗೆ ಬಳಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಮನೆ ಮಾಲೀಕ ಐಪಿಎಸ್ ಅಧಿಕಾರಿಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಕಳೆದ ಒಂದು ವರ್ಷದಿಂದ ಈ ನೈಜಿರಿಯನ್​ ಪ್ರಜೆಗಳು ಬಾಡಿಗೆ ಸಹ ನೀಡದ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ದೇವೇಂದ್ರ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಒಟ್ಟಿನಲ್ಲಿ ಐಪಿಎಸ್​ ಅಧಿಕಾರಿ ಮನೆಯಲ್ಲೇ ನಡೆದಿರುವ ಮಾದಕ ದ್ರವ್ಯ ಸಂಗ್ರಹ ಪ್ರಕರಣ ಚರ್ಚೆಗಿಡಾಗಿದೆ.

Sponsored :

Related Articles