8 ಸಲ ಗೆದ್ದೋರಿಗೆ ಸಚಿವ ಸ್ಥಾನವಿಲ್ಲ! 6 ಬಾರಿ MLA ಆದ್ರೂ ಕೇಳೋರಿಲ್ಲ! ಇದು ಬಿಜೆಪಿ ಅತೃಪ್ತರ ಅಳಲು!!

755

ಸಿಎಂ ಬಿಎಸ್​ವೈ ನೂತನ ಸರ್ಕಾರ ರಚಿಸಿ 25 ದಿನಗಳ ಬಳಿಕ ರಚನೆಯಾದ ಸಚಿವ ಸಂಪುಟ ಸರ್ಕಾರಕ್ಕೆ ಬಲ ತುಂಬುವ ಬದಲು ಅಸಮಧಾನದ ಬೆಂಕಿ ಹೊತ್ತಿಸಿದೆ. ಒಟ್ಟು 18 ಜನರ ಈ ಸಚಿವ ಸಂಪುಟದಲ್ಲಿ ಹಿರಿಯ ಬಿಜೆಪಿ ಶಾಸಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಹೆಚ್ಚು ಭಾರಿ ಗೆದ್ದ ಶಾಸಕರನ್ನೇ ಕಡೆಗಣಿಸಲಾಗಿರೋದು ಅಸಮಧಾನಕ್ಕೆ ಕಾರಣವಾಗಿದ್ದು, ಯಾವೆಲ್ಲ ಶಾಸಕರನ್ನು ನಿರ್ಲಕ್ಷಿಸಲಾಗಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.


ಹುಕ್ಕೇರಿಯಿಂದ 8 ಬಾರಿ ವಿಧಾನಸಭೆಗೆ ಆರಿಸಿ ಬಂದಿರುವ ಹಿರಿಯ ಹಾಗೂ ಅನುಭವಿ ಶಾಸಕ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ಹೊರಗಿಡಲಾಗಿದ್ದರೇ, ಆ ಬಾರಿ ಗೆದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ಶಾಸಕ ಎಸ್.ಅಂಗಾರ ಅವರನ್ನು ಸಹ ಕೈಬಿಡಲಾಗಿದೆ.

ad

ಇನ್ನು ಚಿತ್ರದುರ್ಗದಲ್ಲಿ ಶಾಸಕ ಶ್ರೀರಾಮುಲುಗೆ ಮಣೆ ಹಾಕಲಾಗಿದ್ದರೇ, 6 ಬಾರಿ ಶಾಸಕರಾಗಿರುವ ತಿಪ್ಪಾರೆಡ್ಡಿಗೆ ಅವಕಾಶ ನೀಡಲಾಗಿಲ್ಲ. ಇನ್ನು ಬೆಳಗಾವಿ ರಾಜಕಾರಣದ ದೊಡ್ಡ ಶಕ್ತಿ ಎಂದೇ ಪರಿಗಣಿಸಲಾಗಿರುವ ಬಾಲಚಂದ್ರ ಜಾರಕಿಹೊಳಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

ಇನ್ನು ದಕ್ಷಿಣಕನ್ನಡದ ವಾಜಪೇಯಿ ಎಂದೇ ಕರೆಸಿಕೊಳ್ಳುವ 5 ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಗೂ ಸ್ಥಾನ ಸಿಕ್ಕಿಲ್ಲ. ಇದಲ್ಲದೇ ನಾಲ್ಕಕ್ಕೂ ಹೆಚ್ಚು ಬಾರಿ ಗೆದ್ದ ಹಲವು ಬಿಜೆಪಿ ಶಾಸಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದು, ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.

Sponsored :

Related Articles