ಬೀದರ್​ ನಲ್ಲಿ ಐಟಿ ದಾಳಿ

489

 

ರಾಜ್ಯದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆಯೇ ಐಟಿ ಅಧಿಕಾರಿಗಳ ಕಾರ್ಯಾಚರಣೆಯೂ ವೇಗ ಪಡೆದುಕೊಂಡಿದೆ. ಹೌದು ರಾಜ್ಯದಲ್ಲಿ ಚುನಾವಣೆಗೆ ದುಡ್ಡು ಸಂಗ್ರಹಿಸುತ್ತಿರುವ ಮಾಹಿತಿ ಲಭ್ಯವಾಗುತ್ತಿರುವ ಬೆನ್ನಲ್ಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಇಂದು ಬೀದರ್ ನಗರದಲ್ಲಿ ಬೆಳಂಬೆಳಿಗ್ಗೆ ಐಟಿ ಅಧಿಕಾರಿಗ ತಂಡ ಉದ್ಯಮಿ ಗುರುನಾಥ ಕೊಳ್ಳುರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ad

 

ಐದಾರು ಅಧಿಕಾರಿಗಳ ತಂಡ ಉದ್ಯಮಿ ಗುರುನಾಥ ಕೋಳ್ಳುರ ಅವರ ಹೌಸಿಂಗ್ ಬೋರ್ಡ್​ನಲ್ಲಿರುವ ನಿವಾಸ ಮತ್ತು ಅವರ ಜಿಕೆ ಕನ್ಸ್ಟ್ರಕ್ಷನ್ ಕಚೇರಿ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಗಾಂಧಿ ಗಂಜ್ ಪೊಲೀಸ್ ಠಾಣೆ ಪೊಲೀಸ್ರು ಐಟಿ ಅಧಿಕಾರಿಗಳು ಸಾಥ್ ನೀಡಿದ್ದು ಪರಿಶೀಲನೆ ನಂತರವೆ ಹೆಚ್ಚಿನ ಮಾಹಿತಿ ಸಿಗಲಿದೆ.ಈ ಸಲದ ಚುನಾವಣೆಯಲ್ಲಿ ಉದ್ಯಮಿ ಗುರುನಾಥ ಕೊಳ್ಳುರ್ ಬಿಜೆಪಿ ಪಕ್ಷದ ಟಿಕೆಟು ಆಕಾಂಕ್ಷಿಯಾಗಿದ್ದರು.

 

Sponsored :

Related Articles