ಸಂಕಷ್ಟದ ಮೇಲೆ ಸಂಕಷ್ಟಕ್ಕಿಡಾಗುತ್ತಿರುವ ಉಪೇಂದ್ರ- ರಿಯಲ್ ಸ್ಟಾರ್ ವಿರುದ್ಧ ಪೊಲೀಸ್ ಠಾಣೆಗೆ ದೂರು

3415
9900071610

ad

ಹೊಸ ಪಕ್ಷ ಘೋಷಿಸಿದ ಬೆನ್ನಲ್ಲೇ ನಟ-ನಿರ್ದೇಶಕ ಉಪೇಂದ್ರಗೇ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗಿದೆ. ನಿನ್ನೆಯಷ್ಟೇ ಕೆಪಿಜೆಪಿ ಪಕ್ಷದ ಸ್ಥಾಪಕ ನಟ ಉಪೇಂದ್ರ ಐಟಿಗೆ ಮೋಸ ಮಾಡಿರುವ ವಿಚಾರ ಬಂದಿತ್ತು. ಇದರ ಬೆನ್ನಲ್ಲೇ ಇಂದು ಜೆಡಿಯು ಕಾರ್ಯಕರ್ತರು ಉಪೇಂದ್ರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಕ್ಟೋಬರ್ 31 ರಂದು ಹೊಸ ಪಕ್ಷ ಘೋಷಿಸಿದ್ದ ನಟ ಉಪೇಂದ್ರ, ಸಭೆಯಲ್ಲಿ ಮಾತನಾಡುವ ವೇಳೆ ಜನರು ವೋಟ್ ಹಾಕೋಕೆ ದುಡ್ಡು ತಗೊಳ್ಳೋದರಲ್ಲಿ ತಪ್ಪೆನಿಲ್ಲ. ಅದು ಜನರ ದುಡ್ಡೇ ತಾನೇ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಒಂದು ಪಕ್ಷದ ನಾಯಕನಾಗಿ ಉಪೇಂದ್ರ ಈ ರೀತಿ ಹೇಳಿಕೆ ನೀಡಿರುವುದು ತಪ್ಪು. ಮತದಾರರಿಗೆ ಹಣ ತೆಗೆದುಕೊಳ್ಳಿ ಎನ್ನುವ ಮೂಲಕ ಉಪೇಂದ್ರ ಪ್ರಜಾಪ್ರಭುತ್ವದ ಆಶಯಗಳಿಗೆ ಅಪಚಾರ ಮಾಡಿದ್ದಾರೆ ಎಂದು ಸಂಯುಕ್ತ ಜನತಾದಳ ಪಕ್ಷದ ವತಿಯಿಂದ ದೂರು ನೀಡಲಾಗಿದೆ.

ದೂರು ನೀಡಿದ ಜೆಡಿಯು ಬೆಂಗಳೂರು ನಗರ ವಿಭಾಗದ ಪ್ರಧಾನ ಕಾರ್ಯಕದರ್ಶಿ ಮಾತನಾಡಿ, ಉಪೇಂದ್ರ ಉದ್ದೇಶಪೂರ್ವಕವಾಗಿ ಮತದಾರರನ್ನು ಹಣ ಪಡೆ ಪ್ರೇರೆಪಿಸುವಂತೆ ಮಾತನಾಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದರು.
ನಿನ್ನೆಯಷ್ಟೇ ಉಪೇಂದ್ರ ವಿರುದ್ಧ ತೆರಿಗೆ ವಂಚನೆಯ ಆರೋಪ ಕೇಳಿಬಂದಿತ್ತು. ಹಲವು ಯಶಸ್ವಿ ಚಿತ್ರಗಳನ್ನು ನೀಡಿದ ಉಪೇಂದ್ರ, ಈ ವೇಳೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೇ ತೆರಿಗೆ ಕಟ್ಟದೇ ವಂಚಿಸಿದ್ದಾರೆ ಎಂಬ ದಾಖಲೆಗಳು ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಹೀಗಾಗಿ ಹೊಸ ಪಕ್ಷ ಆರಂಭಿಸಿದ ಬೆನ್ನಲ್ಲೇ ಉಪೇಂದ್ರಗೆ ಸಾಲು-ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಈ ಸವಾಲುಗಳಿಗೆ ಉಪೇಂದ್ರ ಹೇಗೆ ಉತ್ತರಿಸುತ್ತಾರೆ ಕಾದು ನೋಡಬೇಕಿದೆ.

 

 

 

Sponsored :


9900071610