ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜೆ ಸಿ ಮಾಧುಸ್ವಾಮಿ!ಸಿಎಂ ಆಗೇ ಆಗ್ತಾರೆ ಅನ್ನೊ ಭವಿಷ್ಯ ಸುಳ್ಳಾಗಲಿಲ್ಲ!!

1772

ರಾಜ್ಯದ 27 ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಜೆ ಸಿ ಮಾಧುಸ್ವಾಮಿ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಈ ಘಟನೆಗೆ ಸಾಕ್ಷಿಯಾದ್ರು.

ad

ಹೌದು. ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಚಿಕ್ಕನಾಯಕನಹಳ್ಳಿ ಎಮ್​ಎಲ್​ಎ ಮಾಧುಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಿಎಂಗೆ ಶಾಕ್​ ನೀಡಿದ್ದಾರೆ. ಬಿಎಸ್​ವೈ ಸಚಿವ ಸಂಪುಟ ಇಂದು ವಿಸ್ತರಣೆಗೊಂಡಿದ್ದು, 14 ಬಿಜೆಪಿ ಶಾಸಕರು, ಓರ್ವ ವಿಧಾನಪರಿಷತ್ ಸದಸ್ಯರು, ಓರ್ವ ಮಾಜಿ ಶಾಸಕರು ಹಾಗೂ ಓರ್ವ ಪಕ್ಷೇತರ ಶಾಸಕರು ಸಂಪುಟ ಸೇರ್ಪಡೆಗೊಂಡಿದ್ದಾರೆ. ಈ ಮಧ್ಯೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭದ ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಮುಖ್ಯಮಂತ್ರಿಯಾಗಿ ಗೌಪ್ಯತೆಯ ಪ್ರಮಾಣ ಸ್ವೀಕರಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಏರಿದ ಜೆ.ಸಿ.ಮಾಧುಸ್ವಾಮಿ, ಕರ್ನಾಟಕದ ಮಂತ್ರಿಯಾಗಿ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಎಂದು ಓದುವ ಮೂಲಕ ಎಲ್ಲರಿಗೂ ಶಾಕ್​ ನೀಡಿದರು. ಮರುಕ್ಷಣವೇ ತಿದ್ದಿಕೊಂಡ ಮಾಧುಸ್ವಾಮಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಓದಿದರು.

ಈ ಘಟನೆಯಿಂದ ವೇದಿಕೆಯಲ್ಲೇ ನಿಂತಿದ್ದ ಸಿಎಂ ಬಿಎಸ್​ವೈ ಕೆಲಕಾಲ ಶಾಕ್​ ಆದರಲ್ಲದೇ ತೀವ್ರ ಮುಜುಗರಕ್ಕೊಳಗಾದರು. ಅಲ್ಲದೇ ಬಿಜೆಪಿ ನಾಯಕರು ಕೆಲಕಾಲ ಅಚ್ಚರಿಗೊಂಡರು. ಮಾಧುಸ್ವಾಮಿ ಬಳಿಕ ತಪ್ಪು ತಿದ್ದಿಕೊಂಡು ಮಂತ್ರಿ ಎಂದು ಓದಿದ್ರು ಕೂಡ ಅಷ್ಟರಲ್ಲಾಗಲೇ ಮಾಧುಸ್ವಾಮಿ ಮುಖ್ಯಮಂತ್ರಿಯಾಗಿ ಎಂದಿದ್ದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿದೆ.


ಪ್ರಮಾಣವಚನ ಸ್ವೀಕರಿಸಿ ರಾಜ್ಯಪಾಲರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಂದ ಪುಷ್ಪಗುಚ್ಚ ಪಡೆದುಕೊಳ್ಳುವ ವೇಳೆ ಏನ್ ಮಾಧುಸ್ವಾಮಿಯವರೇ, ಹೀಗ್ಮಾಡಿದ್ರಿ ಎಂದು ಸಿಎಂ ವಿಚಾರಿಸಿದ್ರು. ಬಾಯ್ತಪ್ಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸ್ತಿದ್ದೀನಿ ಅಂದೆ ಸರ್ ಅಂದ್ರು ಮಾಧುಸ್ವಾಮಿಯವರು. ಅಂತೂ ಮಾಧುಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸ್ತಾರೆ ಅನ್ನೋ ಭವಿಷ್ಯವಂತೂ ಸುಳ್ಳಾಗಲಿಲ್ಲ !

Sponsored :

Related Articles