ಮರ ಹತ್ತಿ ಮಾವಿನಕಾಯಿ ಕಿತ್ತ ಮಾಜಿ ಸಚಿವ! ಜನಾರ್ಧನ್ ರೆಡ್ಡಿ ಹೊಸ ಸಾಹಸ ಫುಲ್ ವೈರಲ್​!!

613

ಹಾಡಿದ್ದಾಯ್ತು..ಡ್ಯಾನ್ಸ್ ಮಾಡಿದ್ದಾಯ್ತು. ಆ್ಯಂಕರಿಂಗ್​ ಕೂಡ ಆಯ್ತು. ಈಗ ಮಾಜಿ ಸಚಿವ, ಗಣಿಧಣಿ ಜನಾರ್ಧನ್ ರೆಡ್ಡಿ ಮರ ಏರುವ ಸಾಹಸವನ್ನು ಮಾಡಿದ್ದಾರೆ. ಹೌದು ಮಾಜಿ ಸಚಿವ ಜನಾರ್ಧನ ರೆಡ್ಡಿ ಅವ್ರು ಮರ ಏರಿ ಮಾವಿನ ಕಾಯಿ ಕಿತ್ತಿದ್ದು, ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ad

ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಊರಿಗೆ ರೆಡ್ಡಿ ತೆರಳಿದ್ದರು. ಈ ವೇಳೆ ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದಿದ್ದನ್ನು ನೋಡಿ ಫುಲ್​ ಖುಷಿ ಆದ್ರು. ತಕ್ಷಣ ತಾವೇ ಮರವೇರಿ ಪತ್ನಿ ಲಕ್ಷ್ಮಿ ಅರುಣಾಗೆ ಮಾವಿನ ಕಾಯಿ ಕಿತ್ತು ಕೊಟ್ರು.


ರೆಡ್ಡಿ ಮರ ಏರುತ್ತಿರೋದನ್ನು ಕುಟುಂಬದವರು ವಿಡಿಯೋ ಮಾಡಿದ್ದು, ರೆಡ್ಡಿ ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ.

ಮರ ಹತ್ತಿ ಮಾವಿನ ಕಾಯಿ ಕಿತ್ತ ಮಾಜಿ ಸಚಿವ ಜನಾರ್ಧನ ರೆಡ್ಡಿ.

ಮರ ಹತ್ತಿ ಮಾವಿನ ಕಾಯಿ ಕಿತ್ತ ಮಾಜಿ ಸಚಿವ ಜನಾರ್ಧನ ರೆಡ್ಡಿ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 20, 2019

Sponsored :

Related Articles