ಇಂಡಿಯನ್ ಕ್ರಿಕೆಟ್​ ಟೀಂ ಹೊಸ ಲವ್ ಸ್ಟೋರಿ..! ಬೂಂ ಬೂಂ ಬೂಮ್ರಾ ಹೃದಯ ಗೆದ್ದ ಸ್ಯಾಂಡಲವುಡ್​ ಬೆಡಗಿ ಯಾರು ಗೊತ್ತಾ?!

13473
9900071610

ಕ್ರಿಕೆಟ್​ ಹಾಗು ಸಿನಿಮಾ ಜಗತ್ತಿಗೆ ಬಿಡಿಸಲಾಗದ ನಂಟು ಬೆಸೆದುಕೊಂಡಿದೆ. ಕ್ರಿಕೆಟ್​ ಸ್ಟಾರ್ಸ್​​​​​ ಸಿನಿಮಾ ನಾಯಕಿಯರ ಲವ್​ನಲ್ಲಿ ಬಿದ್ದು ಸುಂದರ ಲೈಫ್​ ಕಟ್ಟಿಕೊಂಡಿದ್ದಾರೆ. ಇನ್ ಕೆಲವ್ರು ಲೈಫ್​ ಕಳೆದುಕೊಂಡಿದ್ದು ಇದೆ. ಇದೀಗ ಈ ಕ್ರಿಕೆಟ್​ ಬಣ್ಣದ ಲೋಕದಲ್ಲಿ ಹೊಸ ಪ್ರೇಮ್ ಕಹಾನಿಯೊಂದು ಬೆಳಕಿಗೆ ಬಂದಿದೆ. ಇಂಡಿಯನ್​ ಕ್ರಿಕೆಟ್​​ನ ಫಾಸ್ಟ್​​ ಬೌಲರ್​ ಒಬ್ರ ಪ್ರೀತಿಗೆ ಚಂದನವನದ ಚೆಲುವೆ ಒಬ್ರು ಬೌಲ್ಡ್​ ಆಗಿದ್ದಾರಂತೆ.. ಆ ಎಕ್ಸ್​​ಕ್ಲ್ಯೂಸೀವ್ ಲವ್ ಸ್ಟೋರಿಯ ಫುಲ್​​ ಡಿಟೈಲ್ಸ್​ ಇಲ್ಲಿದೆ ನೋಡಿ..

ad

 

ಈಗ ವಿಶ್ವದಾದ್ಯಂತ ವರ್ಲ್ಡ್​ ಕಪ್​​ ಕ್ರಿಕ್ರೆಟ್​​ ಫಿವರ್​ ಆವರಸಿಕೊಂಡಿದೆ. ಅದ್ರಲ್ಲೂ ಭಾರತದ ಟೀಂ ನಾವು ವರ್ಲ್ಡ್​ ಕಪ್​​ ತಂದೇ ತರ್ತೀವಿ ಅಂತ ದೂರದ ಬಿಳಿಜನರ ನಾಡಲ್ಲಿ ಖಲಿಗಳಂತೆ ಗ್ರೌಂಡ್​​ನಲ್ಲಿ ಹೋರಾಡ್ತಿದ್ದಾರೆ. ಈ ಮಧ್ಯೆ ಇಂಡಿಯನ್ ಕ್ರಿಕ್ರೆಟ್​ ಟೀಂನಲ್ಲಿ ಹೊಸ ಲವ್ ಸ್ಟೋರಿಯೊಂದು ದೊಡ್ಡ ಸೌಂಡ್​ ಮಾಡ್ತಿದೆ.. ಇದೀಗ ವಿಶ್ವದ ಶ್ರೇಷ್ಠ ಫಾಸ್ಟ್​ ಬೌಲರ್​ ಪಟ್ಟದಲ್ಲಿರೋ ಜಸ್ಪ್ರಿತ್​ ಬೂಮ್ರಾ ಆಟಕ್ಕೂ ಸೌತ್​ ಚೆಲುವೆ ಒಬ್ರು ಕ್ಲೀನ್​ ಬೌಲ್ಡ್ ಆಗಿದ್ದಾರಂತೆ. ಆ ಸುಂದ್ರಿ ಬೇರಾರು ಅಲ್ಲ.. ನಟ ಸಾರ್ವಭೌಮದಲ್ಲಿ ಕನ್ನಡಿಗರ ಎದೆಗೆ ಕನ್ನ ಹಾಕಿದ್ದ ಅನುಪಮಾ ಪರಮೇಶ್ವರನ್​…

 

ಅನುಪಮಾ ಕ್ರಿಕೆಟ್​ ಜಗತ್ತಿನನಲ್ಲಿ ಪ್ರೇಮ ಗೀತೆ ಹಾಡ್ತಿದ್ದಾರಂತೆ. ದೈತ್ಯ ಆಟಗಾರನ್ನ ಬೌಲ್ಡ್​ ಮಾಡೋ ಬೂಮ್ರಾಗೆ ಅನುಪಮಾ ಕಣ್​ ಮುಚ್ಚಿಕೊಂಡು ಬೌಲ್ಡ್ ಆಗಿದ್ದಾರೆ ಅಂತ ಗಾಸಿಪ್ ಹಬ್ಬಿದೆ..

ಬೂಂ ಬೂಂ ಬೂಮ್ರಾ ಹಾಗು ಅನುಪಮಾ ಮಧ್ಯೆ ಕುಚ್​​ ಕುಚ್​ ಹೋತಾ ಹೈ ಅಂತ ಗೊತ್ತಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ. ಯಾಕಂದ್ರೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರಿಗೊಬ್ಬರು ಫಾಲೋ ಮಾಡ್ತಿದ್ದಾರೆ. ಅದ್ರಲ್ಲೇನು ವಿಶೇಷ ಅನ್ಕೋಬೇಡಿ. ಯಾಕಂದ್ರೆ ಬೂಮ್ರಾ ಫಾಲೋ ಮಾಡ್ತಿರೋ ಓನ್​ ಆ್ಯಂಡ್ ಓನ್ಲಿ ಹಿರೋಯಿನ್ ಅನುಪಮಾ ಪರಮೇಶ್ವರನ್​..

 

ಜಸ್ಪ್ರಿತ್ ಬೂಮ್ರಾ ಹಾಗು ಅನುಪಮಾ ಒಬ್ಬರಿಗೊಬ್ಬರು ಬರೀ ಫಾಲೋ ಮಾತ್ರ ಮಾಡ್ತಿಲ್ಲಾ.. ಅನುಪಮಾ ಹಾಕೋ ಫೋಸ್ಟ್​ಅನ್ನ ಬೂಮ್ರಾ ಚಾಚೂ ತಪ್ಪದೇ ಲೈಕ್​ ಮಾಡ್ತಾರೆ, ಇನ್ನು ಅನುಪಮಾನೂ ಅಷ್ಟೆ ಬೂಮ್ರಾ ಹಾಕೋ ಪೋಸ್ಟ್​ಅನ್ನ ದಿನನಿತ್ಯದ ಕೆಲಸದಂತೆ ಲೈಕ್ ಶೇರ್​​ ಮಾಡ್ತಾರೆ. ಇದನ್ನ ಗಮನಿಸಿರೋ ಇಬ್ಬರ ಫಾಲೋವರ್ಸ್​ ಅನುಪಮಾ ಬೂಮ್ರಾ ಮಧ್ಯೆ ಪ್ರೇಮಾಂಕುರ ಆಗಿದೆ ಅಂತಿದ್ದಾರೆ.

 

ಎನಿ ವೇ ಕ್ರಿಕೆಟರ್ಸ್​ ಹೀರೋಯಿನ್ಸ್ ಮಧ್ಯೆ ಲವ್ ಆಗೋದು ಹೊಸದೇನಲ್ಲ. ಆದ್ರೆ ಕನ್ನಡ ಸಿನಿಮಾದ ನಾಯಕಿ ಹಾಗು ವಿಶ್ವ ಕ್ರಿಕೆಟ್​​ನ ನಂನರ್-1 ಫಾಸ್ಟ್​ ಬೌಲರ್ ಮಧ್ಯೆ ಲವ್ ಆಗ್ತಿದೆ ಅನ್ನೋ ಗಾಸಿಪ್ ಹಬ್ಬಿರೋದು ಅನುಪಮಾರನ್ನ ಫಾಲೋ ಮಾಡೋ ಹುಡುಗರ ಹಾರ್ಟ್​ ಬ್ರೇಕ್​ ಆಗುವಂತೆ ಮಾಡಿರೋದು ಮಾತ್ರ ಕನ್ಫಮ್​..

Sponsored :


9900071610