ನೆರೆ ಸಂತ್ರಸ್ಥರಿಗಾಗಿ ದೇಣಿಗೆ ಸಂಗ್ರಹಿಸಿದ ಶಾಸಕರು! ಜೆಡಿಎಸ್ ಶಾಸಕರ ಮಾದರಿ ಕಾರ್ಯ!!

455

ರಾಜ್ಯದಲ್ಲಿ ಉಂಟಾಗಿರುವ ಭೀಕರ ನೆರೆ, ಪ್ರವಾಹದ ಹಿನ್ನಲೆಯಲ್ಲಿ ಶಾಸಕರೊಬ್ಬರು ತಮ್ಮ ಹುಟ್ಟು ಹಬ್ಬಕ್ಕೆ ಬ್ರೇಕ್ ಹಾಕಿ, ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹ ಮಾಡಿದ್ದಾರೆ.

ad

ಬೆಂಗಳೂರು ಹೊರವಲಯ ನೆಲಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಪ್ರತಿ ಅಂಗಡಿಗಳಿಗೆ ತೆರಳಿ ದೇಣಿಗೆಯನ್ನು ಸಂಗ್ರಹಿಸಿದರು.

ಇನ್ನೂ ಜನಪ್ರತಿನಿಧಿಗಳು ಸಹ ಸ್ವಯಂ ಪ್ರೇರಿತವಾಗಿ ತಮ್ಮ ಸಂಬಳವನ್ನು ದೇಣಿಗೆ ರೂಪದಲ್ಲಿ ನೀಡಿದರು. ಇದೇ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಮೂರ್ತಿ ಕೇಂದ್ರ ಮತ್ತು ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವಿದೆ, ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ಅಗತ್ಯವಿದ್ದಷ್ಟೂ ಅನುದಾನ ಸಿಕ್ಕಿಲ್ಲ. ಸುಮಾರು ೧೦ ಸಾವಿರ ಕೋಟಿ ಅನುದಾನಕ್ಕೆ ಒತ್ತಾಯವಿದೆ, ಆದರೆ ಕಡಿಮೆ ಮೊತ್ತವಾಗಿ ಹಣ ನೀಡಿರುವುದು ಕೇಂದ್ರ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಶಾಸಕರ ಜೊತೆ ಜೊತೆಗೆ ಜೋಮೋಟೋ ಖಾಸಗಿ ಕಂಪನಿಯ ಕಾರ್ಮಿಕರು ಸಹ ಸುಮಾರು ೭೫ ಸಾವಿರ ಮೌಲ್ಯದ ಆಹಾರ ಮತ್ತು ಅಗತ್ಯ ಸಾಮಗ್ರಿ ಸೇರಿದಂತೆ, ಔಷಧಿಗಳನ್ನು ನೆಲಮಂಗಲ ತಾಲೂಕು ಕಚೇರಿಯ ಉಪ ತಹಶಿಲ್ದಾರ್ ರಮೇಶ್ ರಿಗೆ ಹಸ್ತಾಂತರಿಸಿ, ತಮ್ಮ ಮಾನವೀಯತೆಯನ್ನು ಮೆರೆದರು.

Sponsored :

Related Articles