ಮನಮೋಹಕ ಜೋಗ…!

748

ಜೋಗದ ಸಿರಿ ಬೆಳಕಿನಲ್ಲಿ…..ಹೌದು ರಚ್ಚೆ ಹಿಡಿದ ಮಗುವಿನಂತೆ ಸುರಿಯುತ್ತಲೇ ಇರುವ ಮಳೆಯಿಂದ ರಾಜ್ಯದ ಹಳ್ಳ-ಕೊಳ್ಳ,ನದಿ ಜಲಾಶಯಗಳೆಲ್ಲ ಮೈತುಂಬಿಕೊಂಡು ನಿಂತಿದ್ದರೇ, ಕರುನಾಡಿನ ಪ್ರಮುಖ ಆಕರ್ಷಣೆಯಾಗಿರುವ ಜೋಗವಂತೂ ಹಿಂದೆಂದಿಗಿಂತ ಹೆಚ್ಚು ಆಕರ್ಷಕವಾಗಿ ಮೈ-ಮನ ಸೆಳೆಯುತ್ತಿದೆ.
ಬಿರುಬೇಸಿಗೆಯಲ್ಲೇ ಮನಮೋಹಕವಾಗಿ ಸೆಳೆಯುವ ಜೋಗಾದಲ್ಲಿ ಈಗ ರಾಜಾ,ರಾಣಿ,ರೋರರ್,ರಾಕೇಟ್​ ಎಲ್ಲವೂ ರಭಸದ ಜಲಧಾರೆಯಾಗಿ ಕೆಳಕ್ಕೆ ಧುಮುಕುತ್ತಿದ್ದು, ನೋಡುಗರ ಕಣ್ಮನ ತಣಿಸುತ್ತಿದೆ. ಕಳೆದ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಜೋಗ ಇಷ್ಟು ಮೈತುಂಬಿಕೊಂಡಿದ್ದು, ಜಲಲ….ಜಲಲ…ಜಲಧಾರೆಯಾಗಿ ಹೊಸ ವೈಭವವೊಂದನ್ನು ಸೃಷ್ಟಿಸಿದೆ.

ad

 

ಕಳೆದ 9 ವರ್ಷಗಳ ಬಳಿಕ ಈಭಾರಿ ಲಿಂಗನಮಕ್ಕಿ ಜಲಾಶಯವು ಭರ್ತಿಯಾಗಿರುವುದರಿಂದ 22 ಕ್ಯೂಸೆಕ್​ ನೀರನ್ನು ಹೊರಬಿಡಲಾಗುತ್ತಿದೆ. 11 ಗೇಟ್​ಗಳ ಪೈಕಿ 9 ಗೇಟ್​​ಗಳನ್ನು ತೆಗೆಲಾಗಿರೋದರಿಂದ ಜೋಗದ ಅಂದ ಇನ್ನಷ್ಟು ಹೆಚ್ಚಿದೆ. ವಿಶಾಲವಾದ ಗುಡ್ಡದ ಎಲ್ಲ ಅಂಚಿಂದ ಚಿಮ್ಮಿ ಧುಮುಕುತ್ತಿರುವ ನೀರಿನ ಧಾರೆ, ಅದರ ಮೇಲೆದ್ದು ಅಂಬರ ಚುಂಬಿಸೋ ಮೋಡಗಳ ಸಾಲು, ತಣ್ಣನೆ ಆವರಿಸೋ ಚಳಿ ಎಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಜನ ಜೋಗದ ಅಂದವನ್ನು ಹಾಗೂ ತಮ್ಮ ಪ್ರವಾಸವನ್ನು ಸ್ಮರಣೀಯವಾಗಿಸೋಕೆ ಮೊಬೈಲ್​, ಕ್ಯಾಮರಾಗಳಲ್ಲಿ ಪೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ.
ಮುಂಗಾರುಮಳೆ ಚಿತ್ರದಲ್ಲಿ ಜೋಗದ ಪಕ್ಕದ ಗುಡ್ಡದ ನೆತ್ತಿಯ ಮೇಲಿಂದ ನೀರು ಧುಮುಕುವ ಅಂದವನ್ನು ಚಿತ್ರಿಸಿದ ಬಳಿಕ ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಜಲಪಾತ ಮೈತುಂಬಿಕೊಂಡ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದ್ದು, ಪೋಟೋ ನೋಡಿದ ಪ್ರವಾಸಿಗರು ಸುರಿಯುತ್ತಿರುವ ಮಳೆ ಲೆಕ್ಕಿಸದೇ ಜೋಗದತ್ತ ಮುಖ ಮಾಡುತ್ತಿದ್ದಾರೆ

Sponsored :

Related Articles