ಜೆಡಿಎಸ್ ಜೊತೆ ಕೈಜೋಡಿಸಿದ್ದೇ ಮಹಾಪರಾಧ- ನೀವು ನಂಬಿರೋದು ಮುಳುಗೋ ಹಡಗನ್ನ- ವಿಧಾನಸಭೆಯಲ್ಲಿ ಅಬ್ಬರಿಸಿದ ಬಿಎಸ್ವೈ

1329

 

ಕೊನೆಗೂ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದು 25 ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮಧ್ಯೆ ಇಂದು ವಿಧಾನಸಭೆ ಅಧಿವೇಶನದಲ್ಲಿ ಬಿಎಸ್​ವೈ ಭಾಷಣ ಎಲ್ಲರನ್ನು ಸೆಳೆದಿದ್ದು, ಭಾಷಣದುದ್ದಕ್ಕೂ ಕುಮಾರಸ್ವಾಮಿ-ದೇವೆಗೌಡರನ್ನು ಟೀಕಿಸಿದ್ದ ಬಿಎಸ್​ವೈ ಡಿಕೆಶಿ, ಸಿದ್ಧರಾಮಯ್ಯ ಹೊಗಳಿದ್ದಾರೆ. ಬಿಎಸ್​ವೈ ಪ್ರಕರ ವಾಗ್ದಾಳಿಗೆ ಕುಮಾರಸ್ವಾಮಿ ಬೆಚ್ಚಿಬಿದ್ದಿದ್ದರೇ, ಆಕ್ರೋಶಭರಿತರಾದ ಬಿಎಸ್​ವೈ ಕೊನೆಗೂ ಬಹುಮತ ಸಾಬೀತುಪಡಿಸುವ ಮುನ್ನವೇ ಸಭಾತ್ಯಾಗ ಮಾಡಿ ಸಮರ್ಥ ವಿರೋಧ ಪಕ್ಷದ ನಾಯಕರ ವರ್ಚಸ್ಸಿನ ಮುನ್ನುಡಿ ಬರೆದರು.

ad

ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿಯೊಂದಿಗೆ ಆಡಳಿತ ನಡೆಸಲು ಮೈತ್ರಿ ಮಾಡಿಕೊಂಡಿದ್ದೇ ನಮ್ಮ ಮಹಾಪರಾಧ ಎಂದು ಮಾತು ಆರಂಭಿಸಿದ ಬಿಎಸ್​ವೈ, 20 ತಿಂಗಳು ನಾನು ಪಡಬಾರದ ಕಷ್ಟ ಪಟ್ಟಿದ್ದೇನೆ ಎಂದರು. ತಂದೆ-ಮಗ ನನ್ನ ಮೇಲೆ ಇನ್ನಿಲ್ಲದ ಷರತ್ತು ಹೇರಿದ್ರು.ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸರ್ಕಾರ ಕೆಡವಿದ್ರು ಎಂದು ದೇವೆಗೌಡರ್​ ಕುಟುಂಬದ ವಿರುದ್ಧ ಬಿಎಸ್​ವೈ ತೀವ್ರ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ, ಕಾಂಗ್ರೆಸ್​ನ ಸಿದ್ಧರಾಮಯ್ಯ ಮತ್ತು ಡಿಕೇಶಿಯನ್ನು ಬಿಎಸ್​ವೈ ಮನತುಂಬಿ ಹೊಗಳಿದ್ರು. ಕಾಂಗ್ರೆಸ್​ ನಾಯಕರಿಗೆ ನೀವು ನಂಬಿರುವುದು ಮುಳುಗುವ ಹಡಗು ಎಂದು ಟೀಕಿಸಿದ ಬಿಎಸ್​ವೈಗೆ ಡಿಕೆಶಿ ನನಗೆ ಮಾನ್ಯ ರಾಹುಲ್ ಗಾಂಧಿಯವರು ವಹಿಸಿದ ಜವಾಬ್ದಾರಿ ನಿಭಾಯಿಸಿದ್ದೇನೆ ಅಷ್ಟೇ ಎಂದರು. ಮಠ-ಮಾನ್ಯಗಳ ವಿಚಾರದಲ್ಲಿ ಕುಮಾರಸ್ವಾಮಿ ಹಗುರವಾಗಿ ಮಾತನಾಡಿರುವುದನ್ನು ಟೀಕಿಸುವ ಭರದಲ್ಲಿ ಬಿಎಸ್​ವೈ, ಸಿಎಂ ಕುಮಾರಸ್ವಾಮಿ ಬದಲು ಸಿದ್ಧರಾಮಯ್ಯ ಎಂದಿದ್ದು, ಕೆಲಕಾಲ ನಗೆಗಡಲಲ್ಲಿ ತೇಲಿಸಿತು. ನಾನು ಕೆಲ ಎಮ್​ಎಲ್​​ಎಗಳನ್ನು ಸಂಪರ್ಕಿಸಿದ್ದು ನಿಜ ಎಂದ ಬಿಎಸ್​ವೈ ಕೊನೆಯಲ್ಲಿ ಸಂಜೆಯೊಗಳಗಾಗಿ ಸಾಲ ಮನ್ನಾ ಮಾಡದಿದ್ದರೇ ಸೋಮವಾರ ಕರ್ನಾಟಕ ಬಂದ್​ ಮಾಡುವುದಾಗಿ ಎಚ್ಚರಿಸಿ ಸಭಾತ್ಯಾಗ ಮಾಡಿದರು. ಇವರನ್ನು ಇತರ ಬಿಜೆಪಿ ನಾಯಕರು ಹಿಂಬಾಲಿಸಿದರು. ಒಟ್ಟಿನಲ್ಲಿ ಇಂದು ವಿಧಾನಸಭೆಯಲ್ಲಿ ಬಿಎಸ್​ವೈ ಮಾಡಿದ ಭಾಷಣ ತೀವ್ರ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಬಿಎಸ್​ವೈಅವರ ಪ್ರಕರ ವಾಕ್ಚಾರ್ತುಯಕ್ಕೆ ಸಾಕ್ಷಿಯಾಯಿತು.

Sponsored :

Related Articles