ಅವಳು ಕಾಣ್ತಾ ಇಲ್ಲ ಅಂದ್ರೆ ಓಡಿ ಹೋಗಿದ್ದಾಳೆಂದು ಅರ್ಥವೇ ? ಪೊಲೀಸಪ್ಪನ ವಿಡಿಯೋ ವೈರಲ್ !!

1246

 

ad

ಅಪಹರಣವಾಗಿರುವ ಮಗಳನ್ನ ಹುಡುಕಿಕೊಡಿ ಸ್ವಾಮಿ ಅಂತಾ ಮಹಿಳೆಯೋರ್ವಳು, ಸಂಬಂಧಪಟ್ಟ ಠಾಣೆ ಎಎಸ್‌ಐಗೆ ಫೋನ್ ಮಾಡಿ ವಿಚಾರಿಸಿದಾಗ, ಹೇ ಹೋಗಮ್ಮ ನಿಮ್ಮ ಮಗಳು ಓಡಿಹೋಗಿದ್ದಾಳೆ, ಅವಳನ್ನ ಹುಡುಕೋಕೆ ಗಾಡಿ ಚಾಜ್೯ ಕೊಡು, ಇಲ್ಲಾಂದರೆ ಹುಡುಕೋಕೆ ಆಗಲ್ಲ ಅಂತಾ ಆವಾಜ್ ಹಾಕಿರುವ ಅಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಡ್ರಾಮಿ ಠಾಣೆ ಎಎಸ್‌ಐ ಬಂಡೇರಾವ್ ಆವಾಜ್ ಹಾಕಿರುವ ಎಎಸ್‌ಐ.. ಮೇ ಎರಡರಂದು ಜೇವರ್ಗಿ ತಾಕೂಕಿನ ಅಖಂಡಳಿ ಗ್ರಾಮದ ರೇಣುಕಾ ಎಂಬಾಕೆ, ತನ್ನ 19 ವರ್ಷದ ಮಗಳನ್ನ, ಸೈದಾಪುರ ಗ್ರಾಮದ ಅಮೀನ್ ಪಟೇಲ್ ಎಂಬಾತ ಕಿಡ್ಯ್ನಾಪ್ ಮಾಡಿಕೊಂಡು ಹೋಗಿದ್ದಾನೆ ಅಂತಾ ದೂರು ನೀಡಿದ್ದಳು.

 

 

 

 

ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ರೆ ವಿನಃ, ಯುವತಿಯನ್ನ ಹುಡುಕೋ ಗೋಜಿಗೆ ಹೋಗಿರಲಿಲ್ಲ. ಇದರ ಬಗ್ಗೆ ಯುವತಿ ತಾಯಿ ರೇಣುಕಾ, ಎಎಸ್‌ಐ ಬಂಡೇರಾವ್‌ರನ್ನ ಫೋನ್ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದಾಳೆ.. ಅದಕ್ಕೆ ಅವರು, ಹೇ ನಿನ್ನ ಮಗಳು ಯಾವನದೊ ಜೊತೆ ಓಡಿ ಹೋಗಿದ್ದಾಳೆ..ಅವಳನ್ನ ಹುಡುಕೋಕೆ ಗಾಡಿ ಚಾಜ್೯ ಬೇಕಾಗುತ್ತೆ ಕೊಡು…ಇಲ್ಲಾಂದರೆ ಹುಡುಕೋಕೆ ನಮ್ಮಿಂದ ಆಗಲ್ಲ ಅಂತಾ ಆವಾಜ್ ಹಾಕಿದ್ದಾರೆ. ಸಧ್ಯ ಈ ಆಡಿಯೋ, ಸಾಮಾಜಿಕ ಜಾಲತಾಣಗಳನ್ನ ವೈರಲ್ ಆಗಿದ್ದು, ಎಎಸ್‌ಐ ಬಂಡೇರಾವ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Sponsored :

Related Articles