ಬಾಲಿವುಡ್​​​ಗೆ ಸ್ಯಾಂಡಲ್​ವುಡ್​ ಹಿರಿಯ ನಟ! ದತ್ತಣ್ಣ ಬಿಗ್​ ಸ್ಕ್ರೀನ್​ನಲ್ಲಿ ಜೊತೆಯಾಗ್ತಿರೋದ್ಯಾರಿಗೆ ಗೊತ್ತಾ?!

263

ಬಾಲಿವುಡ್ ನಲ್ಲಿ ಮಿಂಚಲಿದ್ದಾರೆ ಕನ್ನಡದ ಹಿರಿಯ ಪ್ರತಿಭೆ. ಇತ್ತೀಚೆಗೆ ಸ್ಯಾಂಡಲ್ ವುಡ್ ಪ್ರತಿಭೆಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಅಬ್ಬರಿಸಲು ಪ್ರಾರಂಭಿದ್ದಾರೆ. ಸದ್ಯ ಬಾಲಿವುಡ್ ಬಾಯ್ ಜಾನ್ ಸಲ್ಲು ಜೊತೆ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಪ್ರಮುಖ ಪಾತ್ರವಹಿಸುತ್ತಿರುವ ಬೆನ್ನಲ್ಲೇ, ಹಿರಿಯ ನಟ ದತ್ತಣ್ಣ ಕೂಡ ಬಾಲಿವುಡ್​​ಗೆ ಅಡಿ ಇಟ್ಟಿದ್ದಾರೆ.

ad

ಹೌದು ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತ ಸಾಧನೆ  2001ರಲ್ಲಿ ಇಸ್ರೋ ವಿಜ್ಞಾನಿ ರಾಕೇಶ್ ಧವನ್ ನೇತೃತ್ವದಲ್ಲಿ ಉಡಾಯಿಸಲಾದ ರಾಕೆಟ್​.  ಇದೀಗಾ ಈ ನೈಜ ಘಟನೆಯನ್ನು ಆಧರಿಸಿ ಬಾಲಿವುಡ್​ ನಲ್ಲಿ ಸಿನಿಮಾ ಒಂದು ತಯಾರಾಗುತ್ತಿದೆ. ಇನ್ನೂ ಈ ಚಿತ್ರಕ್ಕೆ ‘ಮಿಷನ್ ಮಂಗಲ್​​’ ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ಬಾಲಿವುಡ್​ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ರಾಕೇಶ್ ಧವನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಹಿರಿಯ ನಟ ಕನ್ನಡಿಗ ದತ್ತಣ್ಣ ಕೂಡ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅಕ್ಕಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಮಂಗಳ ಗ್ರಹಕ್ಕೆ ಮೊಟ್ಟ ಮೊದಲ ಬಾರಿಗೆ ಸ್ಯಾಟಲೈಟ್ ಉಡಾವಣೆ ಮಾಡುವಾಗ ಅಲ್ಲಿನ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಪಟ್ಟ ಪರಿಶ್ರಮ, ಜೊತೆಗೆ ಕೊನೆಯ ಆ 45ಸೆಕೆಂಡ್​​ಗಳಲ್ಲಿ ಇಡೀ ದೇಶದಲ್ಲಿದ್ದ ತವಕ, ಆತ್ಮವಿಶ್ವಾಸವನ್ನ ಅಧ್ಬುತವಾಗಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಚಿತ್ರಕ್ಕೆ ಜಗನ್ ಶಕ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅಲ್ಲದೆ ‘ಮಿಷನ್ ಮಂಗಲ್​​’ ಚಿತ್ರದಲ್ಲಿ ತಾರಾಶಿಂಧೆ ರೋಲ್​ನಲ್ಲಿ ವಿದ್ಯಾಬಾಲನ್ ನಟಿಸುತ್ತಿದ್ದು, ಸೋನಾಕ್ಷಿ ಸಿನ್ಹಾ ಸೇರಿದಂತೆ ತಾಪ್ಸಿ, ನಿತ್ಯಮೆನನ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಅಭಿನಯಿಸಿದ್ದಾರೆ.ಈಗಾಗಲೇ ಚಿತ್ರದ ಪೋಸ್ಟರ್ ನಿಂದ ಕುತೂಹಲ ಮೂಡಿಸಿದ್ದ ಮಿಷನ್ ಮಂಗಲ್ ಚಿತ್ರತಂಡ ಇದೀಗಾ ಸದ್ಯ ಮೈ ರೋಮಾಂಚನಗೊಳಿಸುವಂತ ಟೀಸರ್ ರಿಲೀಸ್ ಮಾಡಿ ಚಿತ್ರದ ಬಗೆಗಿನ ನೀರಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೂ ಸ್ವಾತಂತ್ರ್ಯ ದಿನದ ಉಡುಗೊರೆಯಾಗಿ ಆಗಸ್ಟ್15 ರಂದು ಚಿತ್ರ ತೆರೆಗಪ್ಪಳಿಸಲಿದ್ದು, ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡಲಿದೆ ಎಂದು ಕಾದು ನೋಡಬೇಕಾಗಿದೆ.

Sponsored :

Related Articles