ತಾಯಿಗೆ ಮರುಮದುವೆ ಮಾಡಿಸಿದ ಪುತ್ರ! ಮದುವೆ ಬಳಿಕ ಮಗ ಬರೆದ ಪತ್ರದಲ್ಲೇನಿತ್ತು ಗೊತ್ತಾ?!

18742

ತಂದೆ ತಾಯಂದಿರು ಮಕ್ಕಳ ಮದುವೆ ಮಾಡುವುದನ್ನ ಸಾಮಾನ್ಯವಾಗಿ ನೋಡಿರುತ್ತೇವೆ ಆದರೆ ಇಲ್ಲಿ ಮಗನೇ ತಾಯಿಗೆ ಪುನರ್​ ವಿವಾಹ ಮಾಡಿಸಿ  ಮಾದರಿ ಪುತ್ರನಾಗಿ ನಿಂತಿದ್ದಾನೆ.

ಕೇರಳದ ಕೊಲ್ಲಂನ ಇಂಜಿನಿಯರ್ ಗೋಕುಲ್ ಶ್ರೀಧರ್ ತಾಯಿಗೆ ಪುನರ್ ವಿವಾಹ ಮಾಡಿಸಿದ ಯುವಕ. ಶ್ರೀಧರ್ ತಮ್ಮ ಫೇಸ್ ಬುಕ್​ನಲ್ಲಿ ತನ್ನ ಪ್ರೀತಿಯ ತಾಯಿಯ ಬಗ್ಗೆ ಬರೆದಿರುವ “ನನ್ನ ತಾಯಿಯ ಮದುವೆ…” ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿದೆ. ಕೆಲವರು ಈ ಪೋಸ್ಟ್ ನೋಡಿ ಖುಷಿಯಿಂದ ಲೈಕ್ ಕಮೆಂಟ್ ಮಾಡಿದ್ದಾರೆ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ.

ad

ಹೆಗಲೆತ್ತರ ಬೆಳೆದಿರುವ ಮಗ ಗೋಕುಲ್ ಶ್ರೀಧರ್ ಅಮ್ಮನಿಗೆ ಒಂದು ಉತ್ತಮ ವರನನ್ನು ನೋಡಿ ಪುನರ್ ವಿವಾಹ ಮಾಡಿಸಿದ್ದಾನೆ. ಅಷ್ಟೇ ಅಲ್ಲ,  ಅಮ್ಮನಿಗೆ “ಹ್ಯಾಪಿ ಮ್ಯಾರಿಡ್ ಲೈಫ್ ಅಮ್ಮ” ಎಂದು ಪುತ್ರನೇ ತಾಯಿಗೆ ಭಾವುಕವಾಗಿ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ ಆಗಿದೆ.

ಶ್ರೀಧರ ತಾಯಿ ಪತಿಯಿಂದ ಅಪಾರ ಪ್ರಮಾಣದಲ್ಲಿ ಹಿಂಸೆ ಅನುಭವಿಸಿದ್ದರು. ಆ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಶ್ರೀಧರ್,  “ನನಗೆ ಈಗಲೂ ನೆನಪಿದೆ. ನನ್ನ ತಂದೆ ತಾಯಿಗೆ ಕೊಡದ ಕಷ್ಟವಿಲ್ಲ. ಪ್ರತಿದಿನವೂ ಆತನಿಂದ ಹಿಂಸೆ ಅನುಭವಿಸುತ್ತಿದ್ದ ತಾಯಿಯನ್ನು ನೋಡಿ ನಾನೂ ಅಳುತ್ತಿದ್ದೆ. ಒಮ್ಮೆ ತಂದೆ ನೀಡಿದ ಹಿಂಸೆಯಿಂದ ಅಮ್ಮನ ಹಣೆಯಲ್ಲಿ ರಕ್ತ ಒಸರುತ್ತಿದ್ದು. ಆ ನೋವನ್ನು ಸಹಿಸಿಕೊಂಡಿದ್ದ ಅಮ್ಮನ ಬಳಿ ಕೇಳಿದ್ದೆ, ‘ನೀನ್ಯಾಕೆ ಈ ನೋವನ್ನೆಲ್ಲ ಸಹಿಸಿಕೊಂಡಿದ್ದೀಯಾ?’ ಅಂತ. ಅದಕ್ಕೆ ಅಮ್ಮ ಹೇಳಿದ್ದರು, ‘ನಿನಗೋಸ್ಕರ ಮಗನೇ. ನಾನು ಬದುಕಿರೋದೆ ನಿನಗೋಸ್ಕರ. ನಿನಗೋಸ್ಕರ ನಾನು ಎಷ್ಟು ನೋವನ್ನಾದರೂ ಸಹಿಸಿಕೊಳ್ಳಬಲ್ಲೆ’ ಎಂದು. ಆ ಮಾತು ಕೇಳಿ ನನ್ನ ಕಣ್ಣಲ್ಲಿ ಬೇಡವೆಂದರೂ ನೀರು ಉಕ್ಕುತ್ತಿತ್ತು” ಎಂದು ಪತ್ರದಲ್ಲಿ ಶ್ರೀಧರ್ ಬರೆದಿದ್ದಾರೆ.

“ಅಪ್ಪನಿಂದ ಅಮ್ಮ ದಿನವೂ ಹಿಂಸೆ ಅನುಭವಿಸುವುದು ನೋಡಲಾಗದೆ, ನಾವು ಒಮ್ಮೆ ಆ ಮನೆಯಿಂದ ಆಚೆ ಬಂದೆವು. ನಾನು ಅಮ್ಮನ ಕೈ ಹಿಡಿದು ಆ ಮನೆಯಿಂದ ಹೊರಗೆ ಬರುವಾಗಲೇ ನಿರ್ಧರಿಸಿದ್ದೆ, ಅಮ್ಮನಿಗೆ ಮರುಮದುವೆ ಮಾಡಬೇಕು ಎಂದು. ನನ್ನ ಅಮ್ಮ ತನ್ನ ತಾರುಣ್ಯವನ್ನು ನನಗೋಸ್ಕರ ತ್ಯಾಗ ಮಾಡಿದಳು, ಆಕೆಗೆ ಎಷ್ಟೋ ಕನಸುಗಳಿದ್ದವು, ಅವನ್ನೂ ನನಗೋಸ್ಕರ ಮರೆತಳು. ನಾನು ಇನ್ನು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಈ ವಿಷಯವನ್ನು ಗುಟ್ಟಾಗಿ ಇಡುವುದು ನನಗೆ ಇಷ್ಟವಿಲ್ಲ. ಹ್ಯಾಪಿ ಮ್ಯಾರಿಡ್ ಲೈಫ್ ಅಮ್ಮಾ…” ಎಂದು ಗೋಕುಲ್ ಶ್ರೀಧರ್ ಅಮ್ಮನಿಗೊಂದು ಪ್ರೀತಿಯ ಪತ್ರ ಬರೆದಿದ್ದಾರೆ

“ಇಂದಿಗೂ ಕೆಲವು ಕಡೆ ಮರುಮದುವೆಗೆ ನಿಷೇಧವಿದೆ. ಆದರೆ ನನ್ನ ತಾಯಿಯ ಮನಸ್ಸಲ್ಲಿ ವೈವಾಹಿಕ ಬದುಕಿನ ಬಗ್ಗೆ ಇರುವ ಕಹಿಯನ್ನು ಕಳೆಯಬೇಕಿದೆ. ಆಕೆ ಅನುಭವಿಸಿದ ನೋವಿಗೆ ಇನ್ನಾದರೂ ನಗುವಿನ ಪ್ರತಿಫಲ ಸಿಗಬೇಕಿದೆ. ಆದ್ದರಿಂದ ಈ ನಿರ್ಧಾರ” ಎಂದು ಶ್ರೀಧರ್ ಬರೆದಿದ್ದಾರೆ.

ತಾಯಿ ಅನುಭವಿಸಿದ ಕಷ್ಟಗಳು ಎಲ್ಲವನ್ನು ದಿಟ್ಟತನದಿಂದ ಎದುರಿಸಿದ ಆಕೆಯ ಧೈರ್ಯ ಮಗನಿಗಾಗಿ ಎಲ್ಲಾ ನೋವನ್ನು ಸಹಿಸಿ ಉಸಿರುಗಟ್ಟುವ ವಾತಾವರಣದಲ್ಲು ಮಗನಿಗೋಷ್ಕರ ನಗು ನಗುತ ಇದ್ದ ತಾಯಿಯ ತ್ಯಾಗಗಳನ್ನು ನೆನಪಿಸಿಕೊಂಡು ಋಣಸಂದಾಯಕ್ಕೆ ಪ್ರಯತ್ನಿಸಿ ಮಗ ತೆಗೆದುಕೊಂಡಿರುವ ಈ ದಿಟ್ಟ ನಿಲುವು, ಹಾಗು ಮಾನವೀಯ ನಡೆಗೆ ಸಾವಿರಾರು ಜನರು ಸಲಾಂ ಎದ್ದಿದ್ದಾರೆ.

Sponsored :

Related Articles