ರಸ್ತೆ ಬದಿಯ ಅಂಗಡಿಯಲ್ಲಿ ಟೀ ಜೊತೆ ಚಿತ್ರಾನ್ನ ಸವಿದ ಕಿಚ್ಚ- ಅಂಗಡಿಮಾಲೀಕರಿಗೆ ಸುದೀಪ ಕೊಟ್ಟ ದುಡ್ಡೆಷ್ಟು ಗೊತ್ತಾ?!

9643
9900071610

ಅಭಿಮಾನಿಗಳ ಪರ-ವಿರೋಧ ಚರ್ಚೆಯ ನಡುವೆಯೂ ಕಿಚ್ಚ ಸುದೀಪ ಬಿಜೆಪಿಯ ಚಿತ್ರದುರ್ಗದ ಮೊಳಕಾಲ್ಮೂರು ಅಭ್ಯರ್ಥಿ ಶ್ರೀರಾಮುಲು ಪರ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಚುನಾವಣಾ ಪ್ರಚಾರದ ಮಧ್ಯದಲ್ಲಿ ರಸ್ತೆ ಬದಿಯ ಗೂಡಂಗಡಿಗೆ ತೆರಳಿದ ನಟ ಕಿಚ್ಚ ಸುದೀಪ ಟೀ ಹಾಗೂ ಚಿತ್ರಾನ್ನ ಸವಿದಿದ್ದಾರೆ.

ad

ಕೋಟಿ ಒಡೆಯ ಸುದೀಪ್​ ಪುಟ್ಟ ಗುಡಿಸಲಿನಲ್ಲಿ ನಡೆಸುತ್ತಿದ್ದ ಅಂಗಡಿಗೆ ಭೇಟಿ ನೀಡಿದ್ದನ್ನು ನೋಡಿ ಅಂಗಡಿ ಮಾಲೀಕರೇ ಅಚ್ಚರಿಗೊಂಡಿದ್ದರೇ, ಒಂದು ಟೀ-ಚಿತ್ರಾನ್ನಕ್ಕೆ 10 ಸಾವಿರ ರೂಪಾಯಿ ನೀಡಿ ಬಡಕುಟುಂಬಕ್ಕೂ ನೆರವಾಗಿದ್ದಾರೆ. ಇನ್ನು ಮೊಳಕಾಲ್ಮುರು ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಹೆಲಿಕಾಫ್ಟರ್ ಮೂಲಕ ತೆರಳಿದ್ದ ಕಿಚ್ಚ ಸುದೀಪ್ ಜಗಳೂರು ಕ್ಷೇತ್ರದ ರಾಮಚಂದ್ರಪ್ಪ ಮತ್ತು ಸೋಮಶೇಕರ ರೆಡ್ಡಿ ಪರವಾಗಿಯೂ ಭರ್ಜರಿ ಕ್ಯಾಂಪೈನ್ ಮಾಡಿದ್ರು.

 

Sponsored :


9900071610