ಬೈಕ್ ನಲ್ಲಿ ಬೆಂಗ್ಳೂರ್ ರೌಂಡ್ ಹೊಡೆದ ಕಿಚ್ಚ ಸುದೀಪ್ !! ಮದಕರಿ ನಾಯಕನ ಈ ಬೈಕ್ ಬೆಲೆ ಎಷ್ಟು ಗೊತ್ತಾ ?

10058

 ಸ್ಯಾಂಡಲ್​ವುಡ್ ಮಂದಿಗೆ ಕಾರು, ಬೈಕ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಕ್ರಿಕೆಟ್​ನಷ್ಟೇ ಕಾರು, ಬೈಕ್ ಅಂದ್ರೆ ಕ್ರೇಜ್​. ಅದರಲ್ಲೂ ಜಾಲಿ ರೈಡ್​ ಅಂದ್ರೆ ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಹಾಗೆ.

 

ad

 

ಸುದೀಪ್ ಬಳಿ ಈಗಾಗಲೇ ಸಾಕಷ್ಟು ಬೈಕ್ ಕಾರುಗಳಿವೆ. ಆದ್ರೂ ಇದೀಗ ಹೊಸ ಬಿಎಂಡಬ್ಲ್ಯೂಆರ್ 1200 ಬೈಕನ್ನು ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 14 ರಿಂದ 20 ಲಕ್ಷ ರೂಪಾಯಿಗಳಷ್ಟಿದೆ. 20 ಲಕ್ಷ ರೂಪಾಯಿಯ ಬೈಕ್ ಖರೀದಿಸಿದ ಕೂಡಲೇ ಕಿಚ್ಚ ಬೈಕ್ ಮೇಲೆ ಕುಳಿತುಕೊಂಡು ಸಿಲಿಕಾನ್ ಸಿಟಿ ಸುತ್ತಾಡಿದ್ದಾರೆ. ಅಭಿನಯ ಚಕ್ರವರ್ತಿಗೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆ. ಸುದೀಪ್ ರೈಡ್ ಮಾಡ್ತಿರೊ ವಿಡಿಯೋವನ್ನು ಸ್ಯಾಂಡಲ್​ವುಡ್ ಕ್ಯಾಮರಾ ಮಾಂತ್ರಿಕ ಕೃಷ್ಣ ಸೆರೆ ಹಿಡಿದು ಟ್ವಿಟರ್​ಗೆ ಅಪ್​ಲೊಡ್ ಮಾಡಿದ್ದಾರೆ. ಸುದೀಪ್ ಬೈಕ್ ಓಡಿಸುತ್ತಿರುವ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗಿವೆ.

 

Sponsored :

Related Articles