ಇನ್ನೂ ಕಾದಿದೆ ಆಘಾತ! ರಾಜ್ಯದ ಜನತೆಗೆ ನಡುಕ ಹುಟ್ಟಿಸಿದೆ ಸ್ವಾಮೀಜಿ ಭವಿಷ್ಯ!!

4090
9900071610

ರಣ ಭೀಕರ ಪ್ರವಾಹದ ಒಡೆತದಿಂದ ಜನ ಇನ್ನು ಸುಧಾರಿಸಿಕೊಳ್ಳದೆ ಪರಾದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ರಾಜ್ಯದ ಜನತೆಗೆ ಶಾಕ್ ನೀಡಿದ್ದಾರೆ. ಇಷ್ಟಕ್ಕೂ ಶ್ರೀಗಳು ನುಡಿದ ಭವಿಷ್ಯ ಜನತೆಯ ಅಂತರಾಳದಲ್ಲಿ ನಡುಕ ಹುಟ್ಟಿಸಿರೋದ್ಯಾಕೆ ಗೊತ್ತಾ.?

ad

ಗದಗದಲ್ಲಿ ಮಾತನಾಡಿದ ಕೋಡಿಮಠದ ಸ್ವಾಮಿಗಳು ಈಗಾಗಿರೋ ಅನಾಹುತ ಶ್ರಾವಣ‌ ಮುಗಿಯೋವರೆಗೂ‌ ಮುಂದುವರೆಯುತ್ತದೆ. ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ. ಜಗತ್ತೇ ಕಂಡರಿಯದ ಆಘಾತ ಆಗುವ ಲಕ್ಷಣಗಳಿವೆ. ಏನಾಗುತ್ತೆ ಹೇಳುವೆ ಅಂತ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಅಲ್ಲದೆ ಮಳೆ ಇಷ್ಟಕ್ಕೇ ನಿಲ್ಲುವುದಿಲ್ಲ. ಈ ಅಪಾಯಕಾರಿ ಮಳೆ ಅಬ್ಬರ ಇನ್ನೂ ಮುಂದುವರಿಯಲಿದೆ. ಮುಂದಿನ ಮೂರು ತಿಂಗಳು ಜಲಕಂಟಕ ಇರಲಿದೆ ಎಂದು ಕೋಡಿ ಮಠದ ಶ್ರೀಗಳು ರಾಜ್ಯದ ಜನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹಾಪ್ರವಾಹದಿಂದಾಗಿ ಜನರು ಮನೆ, ಜಮೀನು, ಆಸ್ತಿಪಾಸ್ತಿ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಕೆಲವೆಡೆ ಮಳೆ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದೆ. ಜನರೂ ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇಂತಹ ಸಮಯದಲ್ಲಿ ಕೋಡಿ ಮಠದ ಸ್ವಾಮಿಗಳು ಈ ರೀತಿ ಭೀಕರ ಪ್ರವಾಹದ ಮುನ್ಸೂಚನೆಯನ್ನ ನೀಡಿದ್ದು, ರಾಜ್ಯದ ಜನತೆಯ ಮನದಲ್ಲಿ ಬರಸಿಡಿಲು ಬಡಿದಂತಾಗಿದೆ.

Sponsored :


9900071610