ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ! ಲಂಡನ್​​ಗೆ ಪ್ರಯಾಣ ಬೆಳೆಸಿದ ​​ ಕೊಹ್ಲಿ ಪಡೆ!!

975
9900071610

ಇಂಗ್ಲೆಂಡ್ ನಲ್ಲಿ‌ ಮೇ ೩೦ ರಿಂದ ಆರಂಭವಾಗಲಿರುವ ೧೨ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇಂದು ಟೀಂ ಇಂಡಿಯಾ ಗೆಲುವಿನ ವಿಶ್ವಾಸದೊಂದಿಗೆ ಪ್ರಯಾಣ ಬೆಳೆಸಿದೆ. ವಿರಾಟ್ ಕೊಹ್ಲಿ ನೇತೃತ್ವದ ೧೬ ಸದಸ್ಯರ ತಂಡ ಇಂದು ಮುಂಬೈನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದೆ.

ad

ಪ್ರಯಾಣಕ್ಕೂ ಮೊದಲು‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ನಾವು ಸಾಕಷ್ಟು ಸಮತೋಲಿತ ತಂಡವನ್ನ ಹೊಂದಿದ್ದು ಉತ್ತಮ ಕ್ರಿಕೆಟ್ ಅಡುವ ನಿರೀಕ್ಷೆಯಲ್ಲಿದ್ದೆವೆ. ಗಾಯಗೊಂಡಿದ್ದ ಕೇಧಾರ್ ಜಾಧವ್ ಪಿಟ್ ಆಗಿದ್ದು ಸದ್ಯ ಯಾವುದೇ ಗಾಯದ ಸಮಸ್ಯೆ ಇಲ್ಲ ಎಂದರು. ಇದೇ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಬಗ್ಗೆ ಮಾತನಾಡಿ ಅವರಿಗೆ ಇದು ಮೊದಲ ವಿಶ್ವಕಪ್ ಇರಬಹುದು ಆದರೆ ಅವರಿಬ್ಬರು ನಮ್ಮ ತಂಡದ ಫಿಲ್ಲರ್ ಗಳು ಇದ್ದಂತೆ ಅವರಿಗೆ ಅವರ ಜವಾಬ್ದಾರಿಯ ಅರಿವಿದ್ದು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಕೋಚ್ ರವಿಶಾಸ್ತ್ರಿ ಟೂರ್ನಿಯಲ್ಲಿ ಭಾಗವಹಿಸುವ ೧೦ ತಂಡಗಳು ಉತ್ತಮ ತಂಡಗಳೆ ಆಗಿವೆ. ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಫ್ಘಾನಿಸ್ತಾನ ಹಾಗೂ ಅಂಡರ್ ಡಾಗ್ ಖ್ಯಾತಿಯ ಬಾಂಗ್ಲಾದೇಶ ತಂಡ ಕೂಡ ಹೆಚ್ಚು ಬದಲಾವಣೆ ಕಂಡಿದೆ. ಹಾಗಾಗಿ ಕಠಿಣ ಪೈಪೋಟಿ ಇದ್ದೇ ಇರುತ್ತೆ. ಆದರೆ ನಮ್ಮ ತಂಡವೂ ಬಲಿಷ್ಟವಾಗಿದ್ದು ಶ್ರೇಷ್ಠ ಪ್ರದರ್ಶನ ನೀಡಲು ತಂಡ ಉತ್ಸುಕವಾಗಿದೆ ಎಂದರು.

ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಒಟ್ಟು ಒಂಭತ್ತು ಪಂದ್ಯಗಳನ್ನ ಆಡಲಿದೆ. ಇದರಲ್ಲಿ‌ ಶ್ರೇಷ್ಠ ಪ್ರದರ್ಶನ ನೀಡುವ ನಾಲ್ಕು ತಂಡಗಳು ಸೆಮಿಫೈನಲ್ ಗೆ ಆರ್ಹತೆ ಪಡೆಯಲಿದ್ದು ಜುಲೈ ೧೪ ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

Sponsored :


9900071610