ಕೆಪಿಸಿಸಿ ಅಧ್ಯಕ್ಷರಾಗ್ತಾರೆ ಡಿ ಕೆ ಶಿವಕುಮಾರ್ !! ಪಕ್ಷ ಉಳಿಸಲು ಟ್ರಬಲ್ ಶೂಟರ್ ಮೊರೆ ಹೋದ ಎಐಸಿಸಿ !

3077

ರಾಜ್ಯ ರಾಜಕಾರಣದ ಅತ್ಯಂತ ಸ್ಫೋಟಕ ಬದಲಾವಣೆಗಳಾಗುತ್ತಿವೆ. ರಾಜ್ಯದ ಆಯ್ದ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ಕಾಂಗ್ರೆಸ್​​ ಪಕ್ಷ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 9 ಜಿಲ್ಲೆಗಳ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ಬದಲಾವಣೆ ಮಾಡಲು, ವೀಕ್ಷಕರನ್ನು ನೇಮಕ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಪ್ರಖ್ಯಾತಿ ಹೊಂದಿರುವ ಡಿಕೆ ಶಿವಕುಮಾರ್ ರವರಿಗೆ ಪಕ್ಷದ ಅತ್ಯುನ್ನತ ಹುದ್ದೆಯಾದ ‘ಕೆಪಿಸಿಸಿ’ ಪಟ್ಟ ಕಟ್ಟಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧಾರ ನಿರ್ಧಾರ ಮಾಡಿದ್ದಾರೆ.

ad

ಕೊನೆಗೂ ಖಡಕ್ ನಾಯಕ, ಟ್ರಬಲ್ ಶೂಟರ್​ ಗೆ ಅಧಿಕೃತ ಜವಾಬ್ದಾರಿ ನೀಡಲಾಗಿದೆ. ನಿನ್ನೆ ಸಂಜೆ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಇನ್ನು ಪ್ರತಿಪಕ್ಷ ನಾಯಕನಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಆಯ್ಕೆಯಾಗಿದ್ದು, ಮುಂದಿನ ವಾರ AICCಯಿಂದ ಈ ಎರಡೂ ಆದೇಶಗಳು ಅಧಿಕೃತ ಘೋಷಣೆಯಾಗಿ ಹೊರ ಬರಲಿದೆ.

Sponsored :

Related Articles