ಸೋಲಿನ ಪರಾಮರ್ಶೆಗೆ ಮುಂದಾದ ಕಾಂಗ್ರೆಸ್​! ಕೆಪಿಸಿಸಿಯಲ್ಲಿ ಸತ್ಯಶೋಧನಾ ಸಭೆ!!

423

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋಲುಕಂಡಿದೆ. ಹಿಂದೆಂದೂ ಕಂಡರಿಯದ ಸೋಲಿಗೆ ಕೈಪಾಳಯ ಕಂಗಾಲಾಗಿದ್ದು, ಹೈಕಮಾಂಡ್​ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಈಗ ಕಾಂಗ್ರೆಸ್​ ಸತ್ಯಶೋಧನೆಗೆ ಮುಂದಾಗಿದೆ.


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಸತ್ಯಶೋಧನಾ ಸಮಿತಿ ಸಭೆ ಆರಂಭಿಸಿದ್ದು, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಲೋಕಸಭಾ ಚುನಾವಣೆ ಸೋಲಿನ ಕಾರಣಗಳ ಕುರಿತು ಚರ್ಚೆಯಾಗ್ತಿದೆ.

ad


ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದು ಏಕೆ..? ತಳಮಟ್ಟದಲ್ಲಿ ಪಕ್ಷ ಸಂಘಟನೆ ವಿಫಲವಾಯ್ತೇ..? ಕಾರ್ಯಕರ್ತರನ್ನ ಒಟ್ಟುಗೂಡಿಸುವಲ್ಲಿ ಸಮಸ್ಯೆಯಾಯ್ತಾ..? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಸಭೆಯಲ್ಲಿ ಧೃವನಾರಾಯಣ್, ನಸೀರ್ ಅಹ್ಮದ್, ಬಸವರಾಜ ರಾಯರೆಡ್ಡಿ, ಸುದರ್ಶನ್, ವೀರಕುಮಾರ್ ಪಾಟೀಲ್​ ಭಾಗಿಯಾಗಿದ್ದಾರೆ.

Sponsored :

Related Articles