ಅವ್ರ ಮುಖಕ್ಕೆ ಹೇಳಿದ್ದೀನಿ….ಬುದ್ಧಿ ಕಲಿತ್ರೆ ಒಳ್ಳೆದು! ಕೆ.ಎಸ್.ಈಶ್ವರಪ್ಪ ಅವಾಜ್ ಹಾಕಿದ್ದು ಯಾರಿಗೆ ಗೊತ್ತಾ?!

1693

ಕಾಂಗ್ರೆಸ್​-ಜೆಡಿಎಸ್​ನಲ್ಲಿ ಕಾಣಿಸಿಕೊಂಡಿದ್ದ ಅಸಮಧಾನದ ಬೆಂಕಿ ಇದೀಗ ಬಿಜೆಪಿಯಲ್ಲೂ ಹೊಗೆಯಾಡಲಾರಂಭಿಸಿದ್ದು, ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಅತೃಪ್ತರ ಅಸಮಧಾನ ಮುಗಿಲುಮುಟ್ಟಿದೆ. ಇದರ ಬೆನ್ನಲ್ಲೇ ಇದೀಗ ಬಣ ರಾಜಕೀಯವನ್ನು ಕಮಲ ಪಾಳಯವನ್ನು ಕಾಡಲಾರಂಭಿಸಿದ್ದು, ಯತ್ನಾಳ ಅಸಮಧಾನಕ್ಕೆ ಈಶ್ವರಪ್ಪ ಟೀಕಿಸುವ ಮೂಲಕ ಮತ್ತಷ್ಟು ತುಪ್ಪ ಸುರಿದಿದ್ದು, ವಿವಾದ ತೀವ್ರ ಸ್ವರೂಪಪಡೆದುಕೊಳ್ಳುವ ಸಾಧ್ಯತೆ ಇದೆ.


ಹೌದು ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ, ಬಿಜೆಪಿ ರಾಷ್ಟ್ರಾಧ್ಯಕ್ಷರು ಸಂಸದ ನಳೀನ್ ಕುಮಾರ್ ಕಟೀಲ್​ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ಬಿಜೆಪಿಯೊಳಗಿನ ಬಣ ರಾಜಕೀಯಕಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದು, ನಳಿನ್ ಕುಮಾರ್ ಆಯ್ಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ad

ಇನ್ನು ನಳಿನ್ ನೇಮಕವನ್ನು ಬಹಿರಂಗವಾಗಿ ಟೀಕಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಳಿನ್ ಕುಮಾರ್, ಮಂಗಳೂರು ಬಿಟ್ಟು ಆಚೆ ಬಂದು ಕರ್ನಾಟಕವನ್ನು ನೋಡಬೇಕು. ಚಾಮರಾಜನಗರದಿಂದ ಬೀದರ್​ನ ಕೊನೆಯ ಹಳ್ಳಿಯವರೆಗಿನ ಜನರನ್ನು ತಲುಪಬೇಕು. ಕನಿಷ್ಠ ಒಂದು ಜಿಲ್ಲೆಯ 10 ಕಾರ್ಯಕರ್ತರ ಹೆಸರನ್ನಾದರೂ ಹೇಳುವಂತಿರಬೇಕು ಎಂದಿದ್ದರು.

ಇದೀಗ ಯತ್ನಾಳ ಬಹಿರಂಗ ಅಸಮಧಾನಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ತುಪ್ಪ ಸುರಿದಿದ್ದು, ಯತ್ನಾಳ್ ಕೇಳಿ ರಾಜ್ಯಾಧ್ಯಕ್ಷರನ್ನು ನೇಮಿಸೋ ಅವಶ್ಯಕತೆ ಇಲ್ಲ. ಯತ್ನಾಳ್​ಗೆ ಹಲವು ಬಾರಿ ಪಕ್ಷದಲ್ಲೇ ಇದ್ದು ಪಕ್ಷದ ಬಗ್ಗೆ ಮಾತನಾಡಬೇಡಿ ಎಂದಿದ್ದೆ. ಯತ್ನಾಳ್ ಮುಖಕ್ಕೇ ಹೊಡೆದಂತೆ ಹೇಳಿದ್ದೇನೆ ಆದರೂ ತಿದ್ದಿಕೊಂಡಿಲ್ಲ. ಯತ್ನಾಳ್​ಗೆ ಭಗವಂತ ತಿದ್ದಿಕೊಳ್ಳುವ ಬುದ್ಧಿ ಕೊಡ್ಲಿ ಎಂದಿದ್ದಾರೆ.

Sponsored :

Related Articles