ಮುನಿರತ್ನ ಮುಂಬೈ ಪ್ರಯಾಣಕ್ಕೆ ಕುರುಕ್ಷೇತ್ರ ಆಡಿಯೋ ಲಾಂಚ್​ ಅಡ್ಡಿ! ಕಾರ್ಯಕ್ರಮ ಮುಗಿಸಿ ಮಾಯಾ ನಗರಿಗೆ ಹಾರಲಿರುವ ಮುನಿ ರತ್ನ!!

458
9900071610

ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಬೆನ್ನಲ್ಲೇ 14 ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದಾರೆ. ಈ ಪೈಕಿ ಶಾಸಕ ಕಂ ನಿರ್ಮಾಪಕ ಮುನಿರತ್ನ ತಮ್ಮ ಬಹುನಿರೀಕ್ಷಿತ ಪೌರಾಣಿಕ ಚಿತ್ರ ಕುರುಕ್ಷೇತ್ರದ ಆಡಿಯೋ ಲಾಂಚ್​ಗೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ.

ad


ಹೌದು ತಮ್ಮ ಬಹುನಿರೀಕ್ಷಿತ ಪೌರಾಣಿಕ ಚಿತ್ರ ಕುರುಕ್ಷೇತ್ರದ ಆಡಿಯೋ ಲಾಂಚ್​ ಇಂದೇ ಇರೋದ್ರಿಂದ, ಮುನಿರತ್ನ ಇಲ್ಲೇ ಉಳಿದುಕೊಂಡಿದ್ದಾರೆ. ಇಂದು ಸಂಜೆ ನಡೆಯಲಿರೋ ಆಡಿಯೋ ಲಾಂಚ್ ಕಾರ್ಯಕ್ರಮ ಮುಗಿಸಿಕೊಂಡು ಮುಂಬೈಗೆ ಮುನಿರತ್ನ ಪ್ರಯಾಣ ಬೆಳೆಸಲಿದ್ದಾರೆ.

ಇನ್ನು ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಮುಖಾಮುಖಿಯಾಗಲಿದ್ದಾರೆ. ಅಂದಹಾಗೇ ಕುರುಕ್ಷೇತ್ರ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ. ಸಿನಿಮಾದಲ್ಲಿ ದರ್ಶನ್​, ದುರ್ಯೋಧನನ ಅವತಾರಲ್ಲಿ ಬಣ್ಣ ಹಚ್ಚಿದ್ರೆ, ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಪಾತ್ರಕ್ಕೆ ಜೀವ ತುಂಬಿದ್ದಾರೆ.

 

ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾದ ವಿತರಣಾ ಹಕ್ಕು ನಿರ್ಮಾಪಕ ಹಾಗೂ ನಟ ರಾಕ್​ಲೈನ್​ ವೆಂಕಟೇಶ್​ ಅವರು ಖರೀದಿಸಿದ್ದಾರೆ. ನಾಗಣ್ಣ ನಿರ್ದೇಶನದ ಸಿನಿಮಾದಲ್ಲಿ ಅಂಬರೀಷ್​, ರವಿಚಂದ್ರನ್​, ಅರ್ಜುನ್​ ಸರ್ಜಾ, ನಿಖಿಲ್​ ಸೇರಿದಂತೆ ಸಾಕಷ್ಟು ದೊಡ್ಡ ತಾರಾ ಬಳಗವೇ ಇದ್ದು ಆಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿಸಿದೆ.

Sponsored :


9900071610