ನೆರೆ ಸಂತ್ರಸ್ಥರಿಗೆ ಸ್ಪಂದಿಸಿದ ಹಿರಿಯ ನಟಿ ಲೀಲಾವತಿ! ಜಾನುವಾರುಗಳಿಗೆ ಮೇವು ರವಾನೆ!!

15295
9900071610

ನೆರೆ ಸಂತ್ರಸ್ಥರ ನೋವಿಗೆ ಚಲನಚಿತ್ರದ ಹಿರಿಯ ಜೀವ ಡಾ. ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಸ್ಪಂದಿಸಿದ್ದಾರೆ.ಸ್ವಂತ ಖರ್ಚಿನಲ್ಲಿ ಮುಸುಕಿನ ಜೋಳದ ಮೇವುನ್ನು ಖರೀದಿ ಮಾಡಿ ಜಾನುವಾರುಗಳಿಗೆ ರವಾನೆ ಮಾಡಿದ್ದಾರೆ.

ad

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಡಾ.ಲೀಲಾವತಿ ಗ್ರಾಮದ ರೈತರಿಂದ ಮೇವು ಖರೀದಿ ಮಾಡಿ,ಪ್ರವಾಹ ಪೀಡಿತ ಜನರ ಸಹಾಯಕ್ಕೆ ನಿಂತ ಲೀಲಾವತಿ ಕುಟುಂಬ ಮುಂದಾಗಿರುವುದು ಶ್ಲಾಘನಾರ್ಹವಾದದ್ದು.

ಇನ್ನೂ ಉತ್ತರ ಕರ್ನಾಟಕ ನೆರೆ ಸಂತ್ರಸ್ಥರ ನೋವಿಗೆ ಸ್ಪಂದನೆ ಮಾಡಿರುವ ಲೀಲಾವತಿ, ಪ್ರಾಣಿಗಳ ಮೂಕರೋಧನೆ ನೋಡಲಾರದೇ, ಜಾನುವಾರುಗಳಿಗೆ ಒಂದು ಲೋಡ್ ಮುಸುಕಿನ ಜೋಳದ ಮೇವು ಸ್ವತಃ ಲಾರಿಗೆ ತುಂಬವ ಮೂಲಕ ನೆರವಾಗಿದ್ದಾರೆ.

ಅಮ್ಮನಿಗೆ ಮಗ ವಿನೋದ್ ರಾಜ್ ಸಾಥ್ ನೀಡಿದ್ದಾರೆ. ಸ್ವತಹ ಲೀಲಾವತಿ ಕುಟುಂಬ ಜೋಳವನ್ನು ಕೊಂಡು ಕಟಾವು ಮಾಡಿಸಿ ರವಾನಿಸಿದ್ದಾರೆ. ಸ್ವತಹ ಪ್ರಾಣಿ ಪ್ರೀಯರಾಗಿರುವ ಹಿರಿಯ ನಟಿ ಡಾ.ಲೀಲಾವತಿರ ನೆರವು ಇತರಿರಿಗೂ ಮಾದರಿಯಾಗಿದೆ.

Sponsored :


9900071610