ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲೂ ಇದ್ದಾರೆ ಲಂಚಬಾಕ ಅಧಿಕಾರಿಗಳು!

293
Live Bribe: Officer Take Bribe On Farmers For crops in Vijayapura.
Live Bribe: Officer Take Bribe On Farmers For crops in Vijayapura.

ರೈತರು ಈಗಾಗಲೇ ಭೀಕರ ಬರ, ರೈತರ ಸರಣಿ ಆತ್ಮಹತ್ಯೆಯಿಂದ ಬಸವಳಿದ ವಿಜಯಪುರ ರೈತರ ಪಾಲಿಗೆ ಅಧಿಕಾರಿಗಳೇ ಯಮನಂತಾಗಿದ್ದಾರೆ.

 

ad

ಹೌದು ಸರ್ಕಾರ ರೈತರು ಬೆಳೆದ ತೊಗರಿಬೆಳೆಗೆ ಬೆಳೆಗೆ ಬೆಲೆ ಘೋಷಿಸಿ ತೊಗರಿ ಖರೀದಿಗೆ ಸೂಚಿಸಿತ್ತು. ಆದರೇ ಬೆಂಬಲ ಬೆಲೆ ಖರೀದಿಯಲ್ಲೂ ಅಧಿಕಾರಿಯೊಬ್ಬ ಲಂಚಕ್ಕೆ ಕೈಚಾಚಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿಜಯಪುರದ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿನ ಎಪಿಎಂಸಿಯಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಅನ್ನದಾತನಿಗೆ ಕಿಂಚಿತ್ತೂ ಬೆಲೆ ಇಲ್ಲ. ತೊಗರಿ ಮಾರಾಟಕ್ಕೆ ನೋಂದಣಿ ಮಾಡಲು ಬರುವ ರೈತರು ಕ್ವಿಂಟಲ್ ಗೆ 180ರೂ. ಬೇಕು. ಇಲ್ಲಾಂದ್ರತೊಗರಿ ಖರೀದಿಯೇ ಆಗಲ್ಲ. ಇಲ್ಲಿನ ಧನದಾಹಿ ಅಧಿಕಾರಿ ನಿಂಗಪ್ಪ ಮನೂರ ದುಡ್ಡಿಲ್ದೆ ಯಾವ ಕೆಲಸ ಮಾಡೋದೆ ಇಲ್ಲ. ಈಗಾಗಲೇ 116 ರೈತರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ.

 

 

ಈ ಧನದಾಹಿ ಅಧಿಕಾರಿ ಲಂಚ ಪಡೆಯುತ್ತಿರುವ ದೃಶ್ಯ ಬಿಟಿವಿ ನ್ಯೂಸ್​​​ಗೆ ಲಭ್ಯವಾಗಿದೆ. ಇನ್ನು ತೊಗರಿಖರೀದಿ ಕೇಂದ್ರದಲ್ಲಿ ಅಧಿಕಾರಿಯ ಧನದಾಹದ ವಿಡಿಯೋ ಹಾಗೂ ಆತನ ಅಂಧಾದರ್ಬಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್​ ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಇಷ್ಟು ದಿನ ಇದು ಗಮನಕ್ಕೆ ಬಂದಿರಲಿಲ್ಲ. ಈಗ ನೀವು ಗಮನಕ್ಕೆ ತಂದಿದ್ದಿರಿ. ಜಿಲ್ಲಾಧಿಕಾರಿಗಳಿಗೆ ಕೂಡಲೆ ಸೂಚನೆ ನೀಡುತ್ತೇನೆ. ಇದು ಪಾರದರ್ಶಕವಾಗಿ ನಡೆಯಬೇಕು. ಹೀಗಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ. ಸಚಿವರ ಮಧ್ಯಪ್ರವೇಶದಿಂದ ರೈತರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

Sponsored :

Related Articles