2 ಕೈಗಳಿಲ್ಲದಿದ್ದರೂ ಈತ ಕೆಲಸ ಮಾಡೋ ಅಂದ ನೋಡಿ- ಕಲ್ಬುರ್ಗಿಯಲ್ಲೊಬ್ಬ ಮಾದರಿ ವ್ಯಕ್ತಿ!

284

 

ad

ದೇಹದ ಎಲ್ಲಾ ಅಂಗಾಗಳು ಸರಿಯಾಗಿದ್ದರು ಸಹ ಕೆಲವೊಬ್ಬರು ದುಡಿದು ತಿನ್ನೊಕೆ ಹಿಂದೇಟು ಹಾಕುತ್ತಾರೆ. ಹೀಗಿರುವಾಗ ಕಲಬುರಗಿಯಲ್ಲಿ ಯುವಕನೊಬ್ಬ ತನ್ನ 2 ಕೈಗಳನ್ನು ಕಳೆದುಕೊಂಡಿದ್ದರು ಕಾಲುಗಳ ಸಹಾಯದಿಂದ ಮೆಕಾನಿಕ್​ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾನೆ

ಪಿಡಬ್ಲ್ಯೂಡಿ ನೌಕರ ಮಹ್ಮದ್ ಅರ್ಷದ್ ಹಾಗೂ ಶಾಹಿನ್ ದಂಪತಿಗಳ 25 ವರ್ಷದ ಮಗ ಅಬ್ದುಲ್ ರೆಹಮಾನ್ ಹುಟ್ಟಿನಿಂದಲೂ ಎರಡು ಕೈಗಳಿಲ್ಲ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೆಜ್​ವೊಂದರಲ್ಲಿ ತನ್ನ ಕಾಲುಗಳಿಂದಲೇ ಬೈಕ್​ಗಳನ್ನ ರಿಪೇರಿ ಮಾಡಿ ಜೀವನ ಸಾಗಿಸುತ್ತಿದ್ದಾನೆ.ಈತನ ಕೆಲಸ ನೋಡಿ ಹಲವು ಕಸ್ಟಮರ್​ಗಳೆ ಈತನ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಚಿಕ್ಕ-ಪುಟ್ಟ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗೋ ಜನರಿಗೆ ಅಂಗವಿಕಲನಾಗಿದ್ದು ಮಾದರಿ ಜೀವನ ನಡೆಸುತ್ತಿರುವ ಅಬ್ದುಲ್​ ರೆಹಮಾನ್​ ಮಾದರಿಯಾಗಿದ್ದಾನೆ. ಆದರೇ ಈತನ ಜೀವನ ನಿರ್ವಹಣೆಗೆ ಅಗತ್ಯ ನೆರವು ಬೇಕಿದ್ದು, ಅದಕ್ಕಾಗಿ ಸಂಘ-ಸಂಸ್ಥೆಗಳು ಆತನ ನೆರವಿಗೆ ಬರಬೇಕು ಅನ್ನೋದು ಸಾರ್ವಜನಿಕ ಆಗ್ರಹವಾಗಿದೆ.

Sponsored :

Related Articles