ಮಡಿಕೇರಿ ಮರಗಳ ಮಾರಣಹೋಮ ಪ್ರಕರಣ! ಬಿಟಿವಿಗೆ ವರದಿ ಇಂಪ್ಯಾಕ್ಟ್​​, ಡಿಎಫ್​ಓ ಸಸ್ಪೆಂಡ್​!!

528

ಮಡಿಕೇರಿಯಲ್ಲಿ ವಸತಿಗೃಹಗಳ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮಕ್ಕೆ ಮುಂದಾಗಿದ್ದ ಅರಣ್ಯ ಇಲಾಖೆ ವಿರುದ್ಧ ಬಿಟಿವಿ ಪ್ರಸಾರಮಾಡಿದ್ದ ಸುದ್ದಿ ಫಲ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ನಾಶಕ್ಕೆ ಅನುಮತಿ ನೀಡಿದ್ದ ಡಿಎಫ್​ಓ ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.


ಮಡಿಕೇರಿ ಅರಣ್ಯಾಧಿಕಾರಿ ಎಂ.ಎಲ್​.ಮಂಜುನಾಥ್​ರನ್ನು ಸರ್ಕಾರ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ. ಮಡಿಕೇರಿ ಬಳಿ ಸರ್ಕಾರಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ಅಂದಾಜು 890ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಏಟು ಹಾಕಲು ನಿರ್ಧರಿಸಲಾಗಿತ್ತು. ಇದಕ್ಕೆ ಡಿಎಫ್​ಓ ಅನುಮತಿ ಕೂಡ ನೀಡಿದ್ದರು.

ad


ಈ ಬಗ್ಗೆ ಬಿಟಿವಿ ವಿಸ್ಕೃತವಾದ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಅರಣ್ಯ ಇಲಾಖೆಗೆ ಪ್ರಕರಣದ ಕುರಿತು ವಿವರವಾದ ವರದಿ ನೀಡುವಂತೆ ಸೂಚಿಸಿದ್ದರು. ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದ ಜಿಲ್ಲಾಡಳಿತ ಹಾಗೂ ಸರ್ಕಾರ ಡಿಎಫ್​ಓ ಕರ್ತವ್ಯ ಲೋಪವನ್ನು ಪರಿಗಣಿಸಿದ್ದು, ಅಮಾನತ್ತುಗೊಳಿಸಿ ಆದೇಶ ಹೊರಡಿಸಿದೆ. ಬಿಟಿವಿ ವರದಿಯಿಂದ ಅಪಾರ ಪ್ರಮಾಣದ ಹಸಿರು ನಾಶವಾಗುವುದು ತಪ್ಪಿದ್ದಂತಾಗಿದ್ದು, ಸ್ಥಳೀಯರು ಬಿಟಿವಿ ಪ್ರಯತ್ನ ಶ್ಲಾಘಿಸಿದ್ದಾರೆ.

Sponsored :

Related Articles