ಅಂಗಡಿಯಲ್ಲಿ ನಿಂತು ಟೀ ಮಾರಿದ್ರು ದೀದಿ! ಮಮತಾ ಬ್ಯಾನರ್ಜಿ ಈಗ ಚಾಯ್​ವಾಲಿ!!

415

ಪ್ರಧಾನಿ ನರೇಂದ್ರ ಮೋದಿ ಇಂಡಿಯಾದ ಚಾಯ್​ ವಾಲಾ ಎಂದೇ ಖ್ಯಾತಿ ಪಡೆದಿದ್ರು. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮೋದಿಯನ್ನು ಹಲವಾರು ಬಾರಿ ಚಾಯ್​ವಾಲಾ ಎಂದು ಅಣಕಿಸಿದ್ದರು. ಆದರೆ ಇದೀಗ ದೇಶದಲ್ಲಿ ಮತ್ತೊಬ್ಬರು ಚಾಯ್ ಮಾರಿ ಪ್ರಸಿದ್ದಿ ಪಡೆದಿದ್ದಾರೆ.

ad

ಹೌದು ಪಶ್ಚಿಮಬಂಗಾಳದ ಸಿಎಂ ದೀದಿ ಖ್ಯಾತಿಯ ಮಮತಾ ಬ್ಯಾನರ್ಜಿ ಕಾರ್ಯಕರ್ತರಿಗೆ ಟೀ ಮಾಡಿಕೊಡುವ ಮೂಲಕ ಗಮನ ಸೆಳೆದಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳದ ದಿಘಾ ಜಿಲ್ಲೆಯ ದತ್ತಾಪುರಕ್ಕೆ ತೆರಳಿದ್ದ ಮಮತಾ ಕಾರ್ಯಕರ್ತರಿಗೆ ಗರಂ ಗರಂ ಚಾಯ್ ಮಾಡಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.

ಮೋದಿ ತಮ್ಮ ಬದುಕಿನಲ್ಲಿ ಚಾಯ್ ಮಾರಿ ಪ್ರಸಿದ್ಧಿಗೆ ಬಂದ ಬಳಿಕ ಚಾಯ್​ವಾಲಾ ಎಂಬ ಶಬ್ದ ದೇಶದಲ್ಲಿ ಮಹತ್ವ ಪಡೆದುಕೊಂಡಿದ್ದು, ಇದೀಗ ಚಾಯ್ ವಾಲಿಯಾಗಿ ದೀದಿ ಪ್ರಸಿದ್ಧಿ ಪಡೆದುಕೊಂಡಂತಾಗಿದೆ.

Sponsored :

Related Articles