ಮಂಡ್ಯದಲ್ಲಿ ಜೋಡೆತ್ತುಗಳು ಕಾಣೆ !! ಎಲ್ಲಿದ್ದೀರಾ ಯಶ್​ ? ಎಲ್ಲಿದ್ದೀರಾ ಡಿ ಬಾಸ್ ?

11846

30 ದಿನ ಮಂಡ್ಯ ಬಿಟ್ಟು ಹೊರಗೆ ಹೋಗೋದಿಲ್ಲ. ಇಲ್ಲೇ ಫುಲ್​ ಸಿನಿಮಾ ತೋರಿಸುತ್ತೇವೆ.. ಪಂಚೆ ಎತ್ತಿಕಟ್ಟಿ ನಿಂತು ಪರೇಡ್ ಮಾಡುತ್ತೇವೆ, ನಮ್ಮ ಈ ಪರೇಡ್​ ಏಪ್ರಿಲ್​ 18ರವರೆಗೆ ಮುಂದುವರೆಯುತ್ತೆ… ಎಂದೆಲ್ಲಾ ಬೊಬ್ಬಿಲಿಪುಲಿಯಂತೆ ಡೈಲಾಗ್​​ ಹೊಡೆದಿದ್ದ ಜೋಡೆತ್ತು ಬಾಸ್​ಗಳು ಇಂದು ಮಂಡ್ಯದಲ್ಲಿ ನಾಪತ್ತೆ. ಮಂಡ್ಯದ ಜನ ಕೇಳುತ್ತಿದ್ದಾರೆ. ಎಲ್ಲಿದ್ದೀರೀ ಬಾಸ್​ಗಳೇ ಅಂತಾ..ಮೊದಲ ದಿನವೇ ನಾಪತ್ತೆ..ಇನ್ನೂ 30 ದಿನ ಇರ್ತಾರಾ..? ಸಿನಿಮಾದವರನ್ನು ನಂಬಿಕೊಂಡು ಏನು ಮಾಡೋದು..? ನಿನ್ನೆ ನಡೆದ ಱಲಿಯಲ್ಲಿ ಸುಮಲತಾ ಭಾಷಣದ ಬಗ್ಗೆ ಮಂಡ್ಯ ಜನ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾವನಾತ್ಮಕವಾದ ಭಾಷಣ ಮಂಡ್ಯ ಜನರ ಮನಸೆಳೆದಿದೆ. ಆದರೆ ಇಬ್ಬರು ಹೀರೋಗಳ ಡೈಲಾಗ್​​ಗಳು ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ad

 

ಇಬ್ಬರು ಹೀರೋಗಳು ಸಿನಿಮಾ ಡೈಲಾಗ್​ಗಳನ್ನು ಹೊಡೆದಿದ್ದು ಬಿಟ್ಟರೆ ರೈತರ ಬಗ್ಗೆ ಮಾತನಾಡಲಿಲ್ಲ. ನೀರಾವರಿ ಬಗ್ಗೆ ಮಾತನಾಡಲಿಲ್ಲ. ಯೋಧ ಗುರು ಮನೆಗೆ ಯಾಕೆ ಹೋಗಲಿಲ್ಲ ಎಂದು ವಿವರಿಸಲಿಲ್ಲ. ರಸ್ತೆ ಹಾಕಿಸೋ ಬಗ್ಗೆ ಮಾತಾಡಲಿಲ್ಲ..ಸಕ್ಕರೆ ಫ್ಯಾಕ್ಟರಿ ಬಗ್ಗೆ ಏನನ್ನೂ ಹೇಳಲಿಲ್ಲ. ಕೇವಲ ತಮ್ಮ ವಿರುದ್ಧದ ಟೀಕೆಗೆ ಉತ್ತರಿಸಿ ಬೆಂಗಳೂರಿನತ್ತ ತೆರಳಿದರು. ಚುನಾವಣೆಗೆ ಮೊದಲೇ ಹೀಗೆ..ಚುನಾವಣೆ ನಂತರ ಹೇಗೆ ಎಂದೆಲ್ಲಾ ಮಂಡ್ಯದಲ್ಲಿ ಜನ ಪ್ರಶ್ನಿಸತೊಡಗಿದ್ದಾರೆ. ಸುಮಕ್ಕಾ ಇವರಿಬ್ಬರೂ ಬೇಡಕ್ಕಾ ನಾವಿದ್ದೇವೆ ನಿಮ್ಮ ಜತೆ ಎಂದು ಮಂಡ್ಯದ ಜನ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಈ ನಡುವೆ ಅಪ್ಪು ಬಾಸ್​ ಪತ್ರ ಬರೆದು ನಾನು ಸುಮಲತಾ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ಗಂಟಾಘೋಷವಾಗಿ ತಿಳಿಸಿದ್ದಾರೆ. ಇದು ಸುಮಲತಾಗೆ ಭಾರೀ ಹಿನ್ನಡೆ ಯಾಗಿದೆ.

ನಾಮಪತ್ರ ಸಂದರ್ಭದಲ್ಲಿ ಬಹಳಷ್ಟು ಮಂದಿ ಸಿನಿಮಾ ಗಣ್ಯರು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಯಶ್ ದರ್ಶನ್​​ ಬಿಟ್ಟರೆ ಬೇರ್ಯಾರೂ ಬರಲಿಲ್ಲ. ಸಿನಿಮಾದವರನ್ನು ಬಿಟ್ಟು ನಮ್ಮೂರಿಗೆ ಬನ್ನಿ ಅಕ್ಕ ನಾವು ಮತಹಾಕುತ್ತೇವೆ ಅಂತಾ ಜನ..ಸುಮಲತಾ ಪರ ಪ್ರೀತಿ ತೋರಿಸುತ್ತಿದ್ದಾರೆ. ಈ ನಡುವೆ ಸಿಎಂ ಕುಟುಂಬದ ವಿರುದ್ಧ ಯಶ್ ಮತ್ತು ದರ್ಶನ್​​ ಆಕ್ರೋಶ ವ್ಯಕ್ತಪಡಿಸಿರೋದು ಭಾರೀ ಟೀಕೆಗೆ ಕಾರಣವಾಗಿದೆ. ಇವರಿಬ್ಬರಿಗೂ ಇದು ಬೇಕಿತ್ತಾ..? ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡ ದರ್ಶನ್​​, ಬಾಡಿಗೆ ಕೊಡದ ಯಶ್​ ಇವರು ಮುಖ್ಯಮಂತ್ರಿ ಕುಟುಂಬದ ನೈತಿಕತೆ ಪ್ರಶ್ನಿಸೋದು ಸರೀನಾ ಎಂದು ಜೆಡಿಎಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

Sponsored :

Related Articles