ಸಿಂಪಲ್ ಆಗಿ ನೇರವೇರಿತು ಅಣ್ಣಾವ್ರ ಮೊಮ್ಮಗನ ಅರಿಶಿಣ ಶಾಸ್ತ್ರ..!

1423

ಸ್ಯಾಂಡಲ್​ವುಡ್​ನ ದೊಡ್ಮನೆ ಅಣ್ಣಾವ್ರ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವ ರಾಜ್​ ಕುಮಾರ್ ಇದೇ 26 ರಂದು ಮೈಸೂರು ಮೂಲದ ಶ್ರೀದೇವಿ ಎಂಬುವರ ಜೊತೆ ಹಸೆಮಣೆ ಏರಲಿದ್ದಾರೆ. ಈಗಾಗ್ಲೇ ಈ ಜೋಡಿ ಮೈಸೂರಿನಲ್ಲಿ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವತ್ತು ಅಣ್ಣಾವ್ರೂ ಹುಟ್ಟೂರು ಗಾಂಜೂನರಿನಲ್ಲಿ ಯುವ ರಾಜ್​ಕುಮಾರ್ ಅರಿಶಿಣ ಶಾಸ್ತ್ರ ನೇರವೇರಿದೆ. ಕುಟುಂಬಸ್ಥರೆಲ್ಲಾ ಸೇರಿ ಯುವ ರಾಜ್​ನಿಗೆ ಅರಿಶಿಣ ಹಚ್ಚಿ ಸಂಭ್ರಮಪಟ್ಟರು.

ad

ಇನ್ನೂ ಈಗಾಗ್ಲೇ ಯುವ ರಾಜ್​ಕುಮಾರ್ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯ ನಡೆಯುತ್ತಿದೆ. ಸ್ನೇಹಿತರು ಹಾಗೂ ಸಂಬಂಧಿಕರಿಗೆ ಸತ್ವಃ ಮದು ಮಗ ಯುವ ರಾಜ್​ಕುಮಾರ್ ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ.

ಮೇ 26 ರಂದು ಪ್ಯಾಲೇಸ್​ ಗ್ರೌಂಡ್​ನಲ್ಲಿ ಯುವ ರಾಜ್​ಕುಮಾರ್ ಹಾಗೂ ಶ್ರೀದೇವಿಯ ಮದುವೆ ನಡೆಯಲಿದ್ದು, ಇಡೀ ಸ್ಯಾಂಡಲ್​ವುಡ್​ ಈ ಅದ್ಧೂರಿ ಕಲ್ಯಾಣಕ್ಕೆ ಸಾಕ್ಷಿಯಾಗಲಿದೆ.

ನಟ ಸಾರ್ವಭೌಮ ಡಾ. ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ

ನಟ ಸಾರ್ವಭೌಮ ಡಾ. ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 20, 2019

Sponsored :

Related Articles