ಡಿಂಪಲ್ ಕ್ವೀನ್ ರಚಿತಾ ರಾಮ್​​​ ಮನೆಯಲ್ಲಿ ಮೊಳಗಲಿದೆ ಮಂಗಳವಾದ್ಯ! ಇಷ್ಟಕ್ಕೂ ಮದ್ವೆ ಯಾರದ್ದು ಗೊತ್ತಾ?!

78676

ಡಿಂಪಲ್ ಕ್ವೀನ್ ರಚಿತಾ ರಾಮ್​​​ ಮದುವೆ ಯಾವಾಗಾ..? ರಚಿತಾ ಕೈ ಹಿಡಿಯೋ ಹುಡ್ಗಾ ಯಾರು..? ಇದೊಂದು ಪ್ರಶ್ನೆ ರಚ್ಚು ಹೋದಲ್ಲಿ ಬಂದಲ್ಲೆಲ್ಲಾ ಎದುರಾಗ್ತಾನೆ ಇರುತ್ತೆ.. ರಚಿತಾ ಈ ಪ್ರಶ್ನೆಗೆ ಯಾಕ್ರಪ್ಪಾ ನನ್ನ ಮದ್ವೆ ಬಗ್ಗೆ ನಿಮ್ಗೆ ಅಷ್ಟೊಂದು ಇಂಟ್ರೆಸ್ಟ್​.. ನಾನ್ ಇನ್ನೂ ಸಾಧಿಸೋದು ತುಂಬಾ ಇದೆ..ಮದ್ವೆ ವಿಷ್ಯ ಬಿಟ್ಟು ಬೇರೆ ಏನಾದ್ರು ಮಾತಾಡ್ರಪ್ಪಾ ಅಂತ ಹೇಳ್ಕೊಂಡ್ ಬರ್ತಿದ್ರು.. ಆದ್ರೆ ಈಗ ಬುಲ್​ ಬುಲ್​ ಮನೆಯಲ್ಲಿ ಮದುವೆ ವಾಧ್ಯದ ಸದ್ದು ಕೇಳೋ ಟೈಂ ಬಂದಿದೆ.. ಆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ..

ad

ಕೆನ್ನೆ ಮೇಲೆ ಮೂಡೋ ಡಿಂಪಲ್​​​​… ಬಟ್ಟಲು ಕಂಗಳು …. ದುಂಡು ಮುಗ.. ಮಲ್ಲಿಗೆ ನಗು…. ಮನೆ ಮಗಳ ಲುಕ್​​​​​​​​…. ಇದೆಲ್ಲಾ ಇರೋದು ಒನ್​ ಆ್ಯಂಡ್ ಓನ್ಲಿ ರಚಿತಾ ರಾಮ್​ ಬಳಿ. ಹೀಗಾಗಿ ರಚಿತಾ ರಾಮ್​ ಅಂದ್ರೆ ಹುಡುಗರು ಕನಸಿನಲ್ಲೂ ಕನವರಿಸ್ತಾರೆ. ಚಂದನವನದ ಅದೃಷ್ಟ ದೇವತೆ ಅಂತ ಕರೆಸಿಕೊಳ್ಳೋ ರಚಿತಾ ಹರೆಯದ ಹುಡುಗರು, ಹೆಣ್​ಮಕ್ಕಳು ಅಮ್ಮಂದಿರು ಅಪ್ಪಂದಿರು ಎಲ್ಲರಿಗೂ ಪ್ರೀತಿ ಪಾತ್ರದ ನಾಯಕಿ..

 

ಹೋದಲ್ಲಿ ಬಂದಲ್ಲಿ ಎದುರಾಗ್ತಿದ್ದ ಮದುವೆ ಪ್ರಶ್ನೆಗೆ ರಚಿತಾ ಒಂದ್​ ದಿನ ಉತ್ರ ಕೊಟ್ಟಿದ್ರು.. ನಾನು ಮದುವೆ ಆಗ್ತೀನಿ ಗೌಡ್ರ ಹುಡ್ಗನನ್ನೇ ಮದ್ವೆ ಮಾಡ್ಕೋತಿನಿ ಅಂದಿದ್ರು. ಈಗ ರಚ್ಚು ಮನೆಯಲ್ಲಿ ಮದುವೆ ಸಂಭ್ರಮ ಕಳೆ ಕಟ್ಟಿದೆ. ರಚ್ಚು ಮನೆಯವರೆಲ್ಲಾ ಮದುವೆ ಸಿದ್ಧ ಮಾಡಿಕೊಳ್ತಿದ್ದಾರೆ.. ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟೋಕೆ ಕಾರಣ ಯಾರ್ ಗೊತ್ತಾ..? ಬುಲ್​ಬುಲ್​ ಬೆಡಗಿ ರಚಿತಾ ರಾಮ್ ಅಂತ ಕಂಡಿತ ಅಲ್ಲ.. ರಚ್ಚು ಅಕ್ಕ ನಿತ್ಯಾ ರಾಮ್​ಗೆ ಮ್ಯಾರೇಜ್​ ಫಿಕ್ಸ್ ಆಗಿದೆ. ಕನ್ನಡ ಹಾಗು ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರೋ ನಿತ್ಯಾ ರಾಮ್​ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ..

ನಿತ್ಯಾ ರಾಮ್​ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತೆ.. ದಾರವಾಹಿಗಳಲ್ಲಿ ಮಿಂಚಿ ಮನೆಮಗಳಂತಿರೋ ನಿತ್ಯಾ ಚಂದನವನ ಬಳ್ಳಿತೆರೆ ಮೇಲೂ ಕೆಲವೊಂದು ಸಿನಿಮಾಗಳಲ್ಲಿ ಮಿಂಚಿದ ಹುಡ್ಗಿ. ಇದೀಗ ರಚಿತಾ ಅಕ್ಕ ನಿತ್ಯಾ ರಾಮ್​ ವಿದೇಶದಲ್ಲಿರೋ ಗೌಡ್ರ ಹುಡುಗನನ್ನೇ ಮದುವೆ ಆಗ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್​​ನಲ್ಲಿ ನಿತ್ಯಾ ರಾಮ್ ವಿವಾಹ ನಡೆಯುತ್ತೆ..


ನಿತ್ಯಾ ರಾಮ್​ ಮದುವೆ ಆದ್ರೆ ಡಿಂಪಲ್​ ಕ್ವೀನ್​​​ ಮದುವೆಗೆ ಲೈನ್​ ಕ್ಲೀಯರ್ ಆದ ಹಾಗೆ. ಅಕ್ಕನ ಕಲ್ಯಾಣ ಮಾಡಿ ಫ್ರೀ ಆಗೋ ರಚಿತಾ ಆಮೇಲೆ ತನ್ನ ಮನದನ್ನನ ಹುಡುಕಾಟದಲ್ಲಿ ಬ್ಯುಸಿಯಾಗ್ತಾರೆ. ಎನಿ ವೇ ರಚಿತಾರನ್ನ ಎಲ್ಲರು ಕೇಳುತ್ತಿದ್ದ ಮದುವೆ ಪ್ರಶ್ನೆಗೆ ರಚಿತಾ ಅಕ್ಕನ ಮದುವೆ ಮಾಡೋ ಮೂಲಕ ಉತ್ತರ ಕೊಡ್ತಿದ್ದಾರೆ..

Sponsored :

Related Articles