ಕಿರುತೆರೆಯಲ್ಲಿ ಗಟ್ಟಿಮೇಳದ್ದೇ ಸದ್ದು! ಹೊಸಬದುಕಿಗೆ ಕಾಲಿಡುತ್ತಿರುವ ಪುಟ್ಟಗೌರಿ ಮದುವೆಯ ಮಹೇಶ್​!!

5573

ಹಿರಿತೆರೆಯ ಬಳಿಕ ಇದೀಗ ಕಿರುತೆರೆಯಲ್ಲಿ ವಿವಾಹ ಪರ್ವ ಆರಂಭಗೊಂಡಿದೆ. ಹೌದು ಒಬ್ಬೊಬ್ಬರೇ ಕಿರುತೆರೆ  ನಟರು ವೈವಾಹಿಕ ಜೀವನಕ್ಕೆ ಕಾಲಿಡ್ತಿದ್ದಾರೆ.

ad

ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಖ್ಯಾತಿಯ ಸಿದ್ಧಾರ್ಥ ಅಲಿಯಾಸ್ ವಿಜಯ್ ಸೂರ್ಯ  ಇತ್ತೀಚಿಗಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟರು.

ಇದರ ಬೆನ್ನಲ್ಲೇ ಕಳೆದ ಎರಡು ದಿನದ ಹಿಂದಷ್ಟೇ ಬಿಗ್​ಬಾಸ್ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿರೋ ಜಗನ್ ಚಂದ್ರಶೇಖರ್ ನೂತನ ಬಾಳಿಗೆ ಹೆಜ್ಜೆ ಹಾಕಿದ್ರು.

ಈಗ ಪುಟ್ಟಗೌರಿ ಖ್ಯಾತಿಯ ಮಹೇಶ್ ಅಲಿಯಾಸ್ ರಕ್ಷಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ 26 ರಂದು ಭಾನುವಾರ ಬೆಂಗಳೂರಿನ ಅರಮನೆ ಮೈದಾನಲ್ಲಿರೋ ಶೀಶ್ ಮಹಲ್​ನಲ್ಲಿ ಅನುಷಾ ಎಂಬುವರೊಂದಿಗೆ ಏಳು ಹೆಜ್ಜೆ ಹಾಕಲಿದ್ದಾರೆ.

ಖುದ್ದು ರಕ್ಷಾ ಈ ವಿಚಾರವನ್ನ ಇನ್​ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. I am getting hitched!. ಇದು ನಿಮ್ಮೆಲ್ಲರಿಗೂ ನನ್ನ ಮದುವೆ ಆಮಂತ್ರಣ. ನೀವೆಲ್ಲಾರು ನನ್ನ ಮದುವೆ ಬಂದು ಆಮಂತ್ರಣ ನೀಡಬೇಕು ಅಂತಾ ಬರೆದುಕೊಂಡಿದ್ದಾರೆ.

Sponsored :

Related Articles