ರಂಗಭೂಮಿಯ ಮಾಸ್ಟರ್​​ “ಹಿರಣ್ಣಯ್ಯ” ವಿಧಿವಶ! ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ!!

603

ಕನ್ನಡದ ಹಿರಿಯ ನಟ, ನಾಟಕಗಳ ಮೂಲಕವೇ ಹೆಸರಾಗಿದ್ದ ರಂಗಕರ್ಮಿ ಮಾಸ್ಟರ್​​ ಹಿರಣ್ಣಯ್ಯ ವಿಧಿವಶರಾಗಿದ್ದಾರೆ. 85 ವರ್ಷ ವಯಸ್ಸಿನ ಮಾಸ್ಟರ್​​ ಹಿರಣ್ಣಯ್ಯ ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಕೆಲದಿನಗಳ ದಿನಗಳಿಂದ ನಗರದ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮಾಸ್ಟರ್​​ ಹಿರಣ್ಣಯ್ಯ ವಿಧವಶರಾಗಿದ್ದಾರೆ.

ad

15 ಫೆಬ್ರವರಿ 1934 ರಲ್ಲಿ ಮೈಸೂರಿನಲ್ಲಿ ಕೆ.ಹಿರಣ್ಣಯ್ಯ ಹಾಗೂ ಶಾರದಮ್ಮಾ ದಂಪತಿಯ ಪುತ್ರರಾಗಿ ಜನಿಸಿದ ಮಾಸ್ಟರ್​ ಹಿರಣಯ್ಯ, ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಸಿನಿಮಾ ನಟರಾಗಿ, ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಹಾಗೂ ಮುಖ್ಯವಾಗಿ ರಂಗಭೂಮಿಯ ಚಟುವಟಿಕೆಗಳ ಮೂಲಕ ಹಾಗೂ ತೀಕ್ಷ್ಣವಾದ ಸಮಾಜದ ವಿಡಂಬನೆ ಉಳ್ಳ ನಾಟಕಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು.

ಲಂಚಾವತಾರ ಮಾಸ್ಟರ್​​ ಹಿರಣ್ಣಯ್ಯ ಅವರ ಅತ್ಯಂತ ಪ್ರಸಿದ್ಧ ನಾಟಕ. ಇದು ರಾಜ್ಯದಾದ್ಯಂತ ಸಾವಿರಾರು ಯಶಸ್ವಿ ಪ್ರದರ್ಶನ ಕಂಡಿತ್ತು. ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಮಾಸ್ಟರ್​​ ಹಿರಣ್ಣಯ್ಯ ಅವರಿಗೆ ಸಂದಿವೆ.ಮಾಸ್ಟರ್​​ ಹಿರಣ್ಣಯ್ಯ ನಿಧನಕ್ಕೆ ರಂಗಭೂಮಿ ಹಾಗೂ ಸಿನಿಮಾ ರಂಗ ಕಂಬನಿ ಮಿಡಿದಿದೆ. ಮೃತರು ಪತ್ನಿ ಶಾಂತಮ್ಮ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ.

Sponsored :

Related Articles