ಸರ್ಕಾರ ಉರುಳಿಸಲು ಎಸ್​ಎಂಕೆ ನಿವಾಸದಲ್ಲಿ ಸಿದ್ಧವಾಯ್ತು ಮಾಸ್ಟರ್​ ಪ್ಲ್ಯಾನ್​!ನಾಳೆಯೇ 10 ಕಾಂಗ್ರೆಸ್​ ಶಾಸಕರ ರಾಜೀನಾಮೆ!!

2005

ಒಂದೆಡೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್ ಆರಂಭಿಸಿದ್ದರೇ, ಇತ್ತ ಸರ್ಕಾರ ಉರುಳಿಸಲು ರಣತಂತ್ರ ಆರಂಭವಾಗಿದೆ. ಆಫರೇಶನ್ ಕಮಲದ ಕಣಕ್ಕೆ ಎಸ್​.ಎಂ .ಕೃಷ್ಣ ಅಧಿಕೃತವಾಗಿ ಧುಮುಕಿದ್ದು, ಗೆಲುವಿನ ಪಾಂಚಜನ್ಯ ಮೊಳಗಿಸಲು ಮಾಸ್ಟರ್ ಪ್ಲ್ಯಾನ್​ ಸಿದ್ದಪಡಿಸಿದ್ದಾರೆ.


ಇಂದು ಎಸ್​.ಎಂ.ಕೆ ಭೇಟಿ ಮಾಡಿದ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಡಾ.ಸುಧಾಕರ್ ಸಮ್ಮುಖದಲ್ಲೇ ಸರ್ಕಾರ ಉರುಳಿಸಲು ಪ್ಲ್ಯಾನ್ ನಡೆಸಿದ್ದು, ಕೃಷ್ಣಸೂತ್ರ ಆಧರಿಸಿ ಅಂದಾಜು 15 ಕಾಂಗ್ರೆಸ್​ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ.

ad


ನಾಳೆಯೇ ಒಟ್ಟು 10 ಶಾಸಕರು ರಾಜೀನಾಮೆ ಕೊಡಲಿದ್ದು, ಕಾಂಗ್ರೆಸ್​ನ ಮಹೇಶ್​ ಕುಮಟಳ್ಳಿ, ಬಿ.ನಾಗೇಂದ್ರ, ಶ್ರೀಮಂತಪಾಟೀಲ್​​​.ಬಿ.ಸಿ.ಪಾಟೀಲ್​​​, ಶಿವರಾಮ್ ಹೆಬ್ಬಾರ್ .ಕೆ.ಸಂಗಮೇಶ್​, ಜೆಡಿಎಸ್​ನ ಲಿಂಗೇಶ್​, ನಾರಾಯಣಗೌಡಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಎಸ್​.ಎಂ.ಕೃಷ್ಣ ನಿವಾಸದಲ್ಲಿ ಆಪರೇಷನ್​​ ಪ್ಲಾನ್​​​ ಆರಂಭವಾಗಿದ್ದು, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್​.ಅಶೋಕ್​​​. ಗೋವಿಂದ ಕಾರಜೋಳ, ಜೊತೆಗೆ ಮಂಡ್ಯದ ನೂತನ ಸಂಸದೆ ಸುಮಲತಾ ಹಾಗೂ ಕೈ ಶಾಸಕರು ಉಪಸ್ಥಿತರಿದ್ದು, ಸರ್ಕಾರ ರಚಿಸುವ ಕುರಿತು ಚರ್ಚೆ ನಡೆದಿದೆ.


ಇನ್ನು ಮೇ 30 ರ ನಂತರ ಅಂದರೇ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತು ಆರಂಭಿಸಲು ಪ್ಲ್ಯಾನ್ ಸಿದ್ಧಪಡಿಸಲಾಗಿದ್ದು, ಸಧ್ಯದಲ್ಲೇ ದೆಹಲಿಗೆ ತೆರಳಲಿರುವ ಮಾಜಿ ಸಿಎಂ ಬಿಎಸ್​ವೈ ಇದಕ್ಕೆ ವರಿಷ್ಠರ ಒಪ್ಪಿಗೆ ಪಡೆಯಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಇಬ್ಬರು ಮಾಜಿಸಿಎಂಗಳು ಹಾಲಿ ಸಿಎಂ ಕುಮಾರಸ್ವಾಮಿಯವರನ್ನು ಮಾಜಿಯನ್ನಾಗಿಸುವ ಶತಪ್ರಯತ್ನ ಆರಂಭಿಸಿರೋದಂತು ಸತ್ಯ.

Sponsored :

Related Articles