ರಿನೈಸೆನ್ಸ್​ ಹೊಟೇಲ್​ ಬಳಿಕ ಸಚಿವ ಡಿಕೆಶಿ ಅರೆಸ್ಟ್​​​! ಸಚಿವರನ್ನು ವಶಕ್ಕೆ ಪಡೆದ ಮುಂಬೈ ಪೊಲೀಸರು!!

757

ಅತೃಪ್ತರ ಭೇಟಿ ಮಾಡದೇ ಹಿಂತಿರುಗುವುದೇ ಇಲ್ಲ ಎಂದು ಪಟ್ಟು ಹಿಡಿದು ಮುಂಬೈನ ರಿನೈಸೆನ್ಸ್​ ಹೊಟೇಲ್​ ಎದುರು ಬಂಡೆಯಂತೆ ಕೂತಿದ್ದ ಸಚಿವ ಡಿ.ಕೆ.ಶಿವಕುಮಾರ್​ರನ್ನು ಮುಂಬೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಡಿಕೆಶಿಯನ್ನು ವಶಕ್ಕೆ ಪಡೆದ ಪೊಲೀಸರು ಜೀಪ್​ನಲ್ಲಿ ಕರೆದೊಯ್ದಿದ್ದಾರೆ.


ಬೆಳಗ್ಗೆ 8 ಗಂಟೆಗೆ ಡಿ.ಕೆ.ಶಿವಕುಮಾರ್ ರಿನೈಸೆನ್ಸ್ ಹೊಟೇಲ್​ಗೆ ಆಗಮಿಸಿದ್ದರು. ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸಿ ಕರೆದೊಯ್ಯುವುದು ಡಿಕೆಶಿ ಉದ್ದೇಶವಾಗಿತ್ತು. ಆದರೆ ಮುಂಬೈ ಪೊಲೀಸರು ಡಿಕೆಶಿಯವರಿಗೆ ಹೊಟೇಲ್​ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.
ಆದರೆ ಅತೃಪ್ತರನ್ನು ಭೇಟಿ ಮಾಡದೇ ಹಿಂತಿರುವುದಿಲ್ಲ ಎಂದು ಪಟ್ಟು ಹಿಡಿದ ಸಚಿವ ಡಿ.ಕೆ.ಶಿವಕುಮಾರ್, ಮುಂಬೈನ ರಿನೈಸನ್ಸ್ ಹೊಟೇಲ್ ಎದುರೇ ಚೇರ್ ಹಾಕಿ ಕುಳಿತುಬಿಟ್ಟಿದ್ದರು. ಅಷ್ಟೇ ಅಲ್ಲ, 6 ತಾಸುಗಳಿಂದ ಅಲ್ಲೇ ಕಾದಿದ್ದರು.

ad

ಡಿಕೆಶಿಯವರನ್ನು ಮುಂಬೈ ಪೊಲೀಸ್ ಕಮೀಷನರ್, ಐಜಿಪಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಡಿಕೆಶಿ ಯಾವುದಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ಕಮೀಷನರ್ ಸಂಜಯ್ ಬಾವ್ರೆ ನೇತೃತ್ವದಲ್ಲಿ ಡಿಕೆಶಿಯನ್ನು ವಶಕ್ಕೆ ಪಡೆಯಲಾಗಿದ್ದು, ಮುಂಬೈ ವಿವಿ ಆವರಣಕ್ಕೆ ಕರೆದೊಯ್ದಿದ್ದಾರೆ.

ಡಿಕೆಶಿಯೊಂದಿಗೆ ಸಂಜಯ್​​ ನಿರುಪಮ್​​​, ಮಿಲಿನ್​ ದಿವೋರಾ ಅವರನ್ನು ಕೂಡ ಬಂಧಿಸಲಾಗಿದೆ. ಇದೀಗ ಡಿಕೆಶಿ ಬಂಧನ ರಾಜ್ಯದ ಹಾಗೂ ದೇಶದ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಜೆಪಿ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Sponsored :

Related Articles