ಕಾಂಗ್ರೆಸ್​ ವಿರುದ್ಧವೇ ಗುಡುಗಿದ ದೋಸ್ತಿ ಸರ್ಕಾರದ ಸಚಿವ- ಚರ್ಚೆಗೆ ಗ್ರಾಸವಾದ ಎನ್​.ಮಹೇಶ್ ಹೇಳಿಕೆ!

902
9900071610

ದೋಸ್ತಿ ಸರ್ಕಾರದ ಸಚಿವರೊಬ್ಬರು ರಾಜ್ಯದ ಪ್ರಮುಖ ಮೂರು ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಚರ್ಚೆಗೆ ಗುರಿಯಾಗಿದ್ದಾರೆ. ದೋಸ್ತಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ಎನ್​.ಮಹೇಶ್​ ಹೀಗೆ ವಾಗ್ದಾಳಿ ಮಾಡಿ ಸುದ್ದಿಯಾದ ಸಚಿವರು.

ad

ಬಿಎಸ್ಪಿ ನಡಿಗೆ ಪಾರ್ಲಿಮೆಂಟ್ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಜಾತಿ ಅನ್ನುವಂತದ್ದು ನಮ್ಮ ದೇಶಕ್ಕೆ ಅಂಟಿರುವ ದೊಡ್ಡ ಕಳಂಕ ಮತ್ತು ರೋಗ. ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದ ಬಸವಣ್ಣ ಪ್ರಾಣ ತ್ಯಾಗ ಯಾಕೆ ಮಾಡಿದ್ರು..? ಇದು ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರಿಗಷ್ಟೆ ಅರ್ಥವಾಗತ್ತೆ.
ಈ ಸಿದ್ಧಾಂತ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ನವರಿಗೆ ಅರ್ಥವಾಗೋದಿಲ್ಲ. ಜಾತಿ ವ್ಯವಸ್ಥೆ ಎಲ್ಲಿವರೆಗೆ ಜೀವಂತವಿರುತ್ತದೆ ಅಲ್ಲಿಯವರೆಗೆ ಕಾಂಗ್ರೆಸ್, ಬಿಜೆಪಿ, ಜನತಾದಳ ಜೀವಂತವಾಗಿರುತ್ತವೆ. ಜಾತಿ ವ್ಯವಸ್ಥೆ ಯಾವಾಗ ಹೋಗುತ್ತದೋ ಅಂದು ಬಸವಣ್ಣನ ಬಿಎಸ್ಪಿ ಅಧಿಕಾರಕ್ಕೆ ಬರುತ್ತೆ ಅಂತ ಜಾತಿ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳನ್ನು ಟೀಕಿಸಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

Sponsored :


9900071610