ಸ್ಯಾಂಡಲ್ ವುಡ್​​ಗೆ ಸಚಿವ ಜಮೀರ್ ಅಹ್ಮದ್ ಖಾನ್​ ಪುತ್ರ! ಜಾಯಿದ್​​ ಖಾನ್​ ತೆರೆಗೆ ತರಲಿದ್ದಾರೆ ಬೆಲ್​ಬಾಟ್ಂ ಜಯತೀರ್ಥ!!

944

ಈ ವರ್ಷ ಸ್ಯಾಂಡಲವುಡ್​​​​ನಲ್ಲಿ ಹಸೊ ಜನರೇಶನ್​​​ ಹುಡುಗರೇ ಸದ್ದು ಮಾಡ್ತಿದ್ದಾರೆ. ಈಗಾಗಲೇ ನಟ ದಿ.ಅಂಬರೀಶ್​ ಪುತ್ರ ಅಭಿಷೇಕ್,  ಸುಧಾರಾಣಿ ಪುತ್ರಿ ಹೀಗೆ ಹಲವಾರು ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಸಚಿವ ಜಮೀರ್ ಅಹ್ಮದ್ ಪುತ್ರ ಜಾಯಿದ್ ಅಹ್ಮದ್ ಖಾನ್​.

ad

ಹೌದು ಮೈತ್ರಿ ಸರ್ಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜಾಯಿದ್ ಅಹ್ಮದ್ ಖಾನ್ ಸ್ಯಾಂಡಲ್​ವುಡ್​ ಸಿನಿರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕೂಡ ಚಿತ್ರರಂಗಕ್ಕೆ ಬಂದಿದ್ದಾರೆ.  ಸಚಿವ ಜಮೀರ್ ಖಾನ್ ಪುತ್ರ ಜಾಯಿದ್ ಖಾನ್ ಸ್ಯಾಂಡಲ್ ವುಡ್ ಗೆ ಪ್ರವೇಶಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸಚಿವ ಜಮೀರ್ ಅಹ್ಮದ್ ಪುತ್ರ ಜಾಯಿದ್ ಅಹ್ಮದ್ ಖಾನ್ ಈಗಾಗಲೇ ಮುಂಬೈನಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಬೆಲ್ ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ನಟ ರಿಷಬ್ ಶೆಟ್ಟಿಯನ್ನು ಮೊದಲ ಬಾರಿ ನಾಯಕರಾಗಿ ತೆರೆ ಮೇಲೆ ಪರಿಚಯಿಸಿದರು. ಈಗ ಸಚಿವ ಜಮೀರ್ ಪುತ್ರನನ್ನು ಜಯತೀರ್ಥ ತೆರೆಗೆ ತರುತ್ತಿದ್ದಾರೆ. ಜಯತೀರ್ಥ ಸಾರಥ್ಯದಲ್ಲಿ ಸಚಿವ ಜಮೀರ್ ಖಾನ್ ಪುತ್ರ ಜಾಯಿದ್ ಖಾನ್ ತೆರೆ ಮೇಲೆ ಮೋಡಿ ಮಾಡಲಿದ್ದಾರೆ.

ಸಧ್ಯಕ್ಕೆ ಜಾಯಿದ್ ಯಾವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಧ್ಯದಲ್ಲೇ ಈ ಬಗ್ಗೆ ಸ್ವತಃ ಜಯತೀರ್ಥ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಸ್ಯಾಂಡಲವುಡ್​​ನಲ್ಲಿ ಈ ವರ್ಷ ಹೊಸ ಮುಖಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರವೇಶಿಸಿದ್ದು ಪ್ರೇಕ್ಷಕರು ಮನಗೆಲ್ಲುವ ಕನಸಿನಲ್ಲಿದ್ದಾರೆ.

Sponsored :

Related Articles