ಮಾಸ್ತಿಗುಡಿ ಹಳ್ಳಕ್ಕೆ ಬಿದ್ದ ಕೈ ಶಾಸಕನ ಪುತ್ರಿ ! ಇದು ಮಾಯ್ಕೊಂಡದ “ಸುಂದರ” ಪ್ರೇಮ್ ಕಹಾನಿ !!

3341
MLA Daughter Marriage with film Producer.

ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್​ ಗೌಡ ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಪುತ್ರಿ ಜೊತೆ ಪರಾರಿಯಾಗಿರುವ ದೂರು ದಾಖಲಾಗಿದೆ.

ad

ಆದರೆ ಶಾಸಕರ ಪುತ್ರಿ ಈಗಾಗಲೇ ಗುರುಹಿರಿಯ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮಾಸ್ತಿಗುಡಿ ನಿರ್ಮಾಪಕ ಸುಂದರ್​ಗೌಡ ಹಾಗೂ ಕಾಂಗ್ರೆಸ್​ ಶಾಸಕ ಮಾಯಕೊಂಡ ಶಿವಮೂರ್ತಿ ನಾಯಕ್ ರ ಪುತ್ರಿ ಲಕ್ಷ್ಮಿ ನಾಯಕ್ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ಬೆಳಗ್ಗೆ ಶಾಸಕರ ಪುತ್ರಿ ಲಕ್ಷ್ಮಿ ನಾಯಕ್ ಸುಂದರ್​ ಗೌಡ ಜೊತೆಗೆ ಪರಾರಿಯಾಗಿದ್ದು, ಇಬ್ಬರಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಯಲಹಂಕ ನ್ಯೂಟೌನ್​ ಠಾಣೆಯಲ್ಲಿ ಮಿಸ್ಸಿಂಗ್​ ಕಂಪ್ಲೇಂಟ್​ ದಾಖಲಾಗಿದ್ದು ಪೊಲೀಸರು ಎರಡು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದರು.

 

ತನ್ನ ಪುತ್ರಿ ಲಕ್ಷ್ಮಿ ನಾಯಕ್ ಮತ್ತು ಸುಂದರ ಗೌಡ ಪರಸ್ಪರ ಪ್ರೀತಿಸುತ್ತಿರುವುದು ಶಾಸಕರು ಮತ್ತವರ ಪತ್ನಿಗೆ ತಿಳಿದಿತ್ತು. ಅದೇ ಕಾರಣಕ್ಕೆ ಸ್ವಜಾತಿಯ ಹುಡುಗನನ್ನು ವರನಾಗಿ ಅರಸುತ್ತಿದ್ದರು. ಅಷ್ಟರಲ್ಲಿ ಲಕ್ಷ್ಮಿ ನಾಪತ್ತೆಯಾಗಿದ್ದಾರೆ. ಈಗ ಬಂದಿರೋ ಮಾಹಿತಿ ಪ್ರಕಾರ ಚಾಮುಂಡಿ ಬೆಟ್ಟದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ ಎನ್ನಲಾಗಿದೆ. ನಟ ದುನಿಯಾ ವಿಜಯ್ ಸೇರಿದಂತೆ ಹಲವರು ಈ ಪ್ರೇಮ ವಿವಾಹಕ್ಕೆ ಬೆಂಗಾವಲಾಗಿ ನಿಂತಿದ್ದಾರೆ.

Sponsored :

Related Articles