ಕೊನೆಗೂ ಪೊಲೀಸರಿಗೆ ಶರಣಾದ ಎಮ್​ಎಲ್​ಎ ಪುತ್ರ ನಲಪಾಡ!

1268
MLA NA Harris Son Surrendered to Police At Bengaluru.
MLA NA Harris Son Surrendered to Police At Bengaluru.

ಬೆಂಗಳೂರಿನಲ್ಲಿ ಶಾಸಕ ಹ್ಯಾರಿಸ್ ಪುತ್ರ ಗೂಂಡಾಗಿರಿ ಪ್ರಕರಣದಲ್ಲಿ ಕೊನೆಗೂ ಶಾಸಕ ಹ್ಯಾರಿಸ್​ ಪುತ್ರ ಕಬ್ಬನಪಾರ್ಕ್​​ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

 

ad

ಮೊಹಮ್ಮದ್​ ನಲಪಾಡ್​​ ಠಾಣೆಗೆ ಬಂದು ಹಾಜರಾಗುತ್ತಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಬಳಿ ಅಪಾರ ಪ್ರಮಾಣದ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.  ಕೊನೆಗೂ ಮೊಹಮ್ಮದ್​ ನಲಪಾಡು ಕಬ್ಬನಪಾರ್ಕ್​ ಕಡೆಯಿಂದ ನಡೆದುಕೊಂಡು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಹಾಜರಾಗುತ್ತಿದ್ದಂತೆ ಕಬ್ಬನ್ ಪಾರ್ಕ್ ಪೊಲೀಸರು ಆತನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಯೊಳಗೆ ವಿಚಾರಣೆ ನಡೆಸಿದ್ದಾನೆ.

 

 

  ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ನಲಪಾಡ್​ನನ್ನು ನಮಗೆ ತೋರಿಸಬೇಕೆಂದು ಪ್ರೊಟೆಸ್ಟ್​ ನಡೆಸಿದರೇ, ಗೂಂಡಾ ನಲಪಾಡ್​ ನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಲಕಾಲ ಕಬ್ಬನ್ ಪಾರ್ಕ್​ ಪೊಲೀಸ್ ಠಾಣೆ ಎದುರು ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಮೊಕ್ಕಾ ಹೂಡಿದ ಡಿಸಿಪಿ ಚಂದ್ರಗುಪ್ತ ಲಾಠಿ ಹಿಡಿದು ಬಿಜೆಪಿ ಹಾಗೂ ಕಾಂಗ್ರೆಸ್ಕಾ ರ್ಯಕರ್ತರನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು.  ಮೂಲಗಳ ಮಾಹಿತಿ ಪ್ರಕಾರ ಹ್ಯಾರೀಸ್ ಪುತ್ರ ಮನೆಯಲ್ಲೇ ಇದ್ದ ಎನ್ನಲಾಗಿದ್ದು, ಅಶೋಕ ನಗರ ಪೊಲೀಸರು ಅವರ ಮನೆಗೆ ತೆರಳಿ ಮನವೊಲಿಸಿದ ಬಳಿಕ ಹ್ಯಾರಿಸ್ ಪುತ್ರ ನಲಪಾಡ್ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಈಗಾಗಲೇ ಮೊಹಮ್ಮದ್​ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಮಧ್ಯಾಹ್ನ ಸ್ಥಳ ಮಹಜರಿಗೆ ಕರೆದೊಯ್ದು ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೊನೆಗೂ ತನ್ನ ದರ್ಪದ ಮೂಲಕ ಬಡಪಾಯಿ ಯುವಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದು ನಲಪಾಡ ಕೊನೆಗೂ ಕಂಬಿ ಹಿಂದೆ ಸೇರುವ ಕಾಲ ಸನ್ನಿಹಿತವಾಗಿದೆ.

Sponsored :

Related Articles