ಪಂಚತಂತ್ರದ ಸೋನಾಲ್​​​​ ಜೊತೆ ಬನಾರಸ್​​ಗೆ ಹೊರಟ ಮಾಜಿ ಸಚಿವ ಜಮೀರ್ ಪುತ್ರ ಜಾಹಿದ್​ ಖಾನ್​!!

895
9900071610

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಬ್ಬೊಬ್ಬರಾಗಿ ಸೆಲೆಬ್ರೆಟಿಗಳ ಮಕ್ಕಳು ಎಂಟ್ರಿ ಕೊಡಲು ಶುರು ಮಾಡಿದ್ದಾರೆ. ಸದ್ಯ ಚಂದನವನದ ನಟಿ ಸುಧಾರಾಣಿ ಮಗಳು , ನಟಿ ಶೃತಿ ಮಗಳು, ಇನ್ನೂ ದೊಡ್ಡ ಮನೆ ಕುಟುಂಬದ ನಟ ರಾಘವೇಂದ್ರ ರಾಜ್ ಕುಮಾರ್ ಮಗ ಗುರುರಾಜ್ ಕುಮಾರ್ ಹಾಗೂ ಅದೇ ಮನೆತನದ ನಟ ರಾಮ್ ಕುಮಾರ್ ಮಗಳು ಧನ್ಯ , ನಟ ರವಿಚಂದ್ರನ್ 2ನೇ ಮಗ ಇನ್ನೂ ಹಲವಾರು ಸಿನಿರಂಗದ ಮಕ್ಕಳು ಸಿನಿರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

ad

ಈ ಮಧ್ಯೆ ರಾಜಕಾರಣಿ ಮಕ್ಕಳು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸಿನಿಜಗತ್ತಿಗೆ ಧುಮುಕಿದ್ದಾರೆ .ಅದರಲ್ಲಿ ಈಗಾಗಲೇ ಮಾಜಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಮೊದಲ ಸಿನಿಮಾದಲ್ಲಿಯೇ ಯಶಸ್ಸು ಕಂಡಿದ್ದಾರೆ. ಸಧ್ಯ ಇದೇ ಸಾಲಿಗೆ ಜಮೀರ್ ಖಾನ್ ಪುತ್ರ ಕೂಡ ಸೇರ್ಪಡೆಯಾಗಿದ್ದು, ಇಷ್ಟರಲ್ಲಿಯೇ ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಿನಿಮಾ ಯಾವುದು ಎಂಬುವುದು ಮಾತ್ರ ಅನೌನ್ಸ್ ಮಾಡಿರಲಿಲ್ಲ.

ಆದರೀಗ ಸಿನಿಮಾದ ಹೆಸರು ಲಾಂಚ್ ಆಗಿದ್ದು, ಸಿನಿಮಾದ ನಾಯಕಿ ಫಿಕ್ಸ್ ಆಗಿದ್ದಾರೆ. ಹೌದು ಬೆಲ್ ಬಾಟಂ ಚಿತ್ರವನ್ನು ನಿರ್ದೇಶಿಸಿ ತಮ್ಮ ಮೊದಲ ಚಿತ್ರದಲ್ಲಿಯೇ ಸೈ ಎನಿಸಿಕೊಂಡಿದ್ದ ನಿರ್ದೇಶಕ ಜಯತೀರ್ಥ ಜಮೀರ್ ಪುತ್ರ ಜಾಹಿದ್ ಖಾನ್ ರ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಜಾಹಿದ್ ಚೊಚ್ಚಲ ಚಿತ್ರಕ್ಕೆ ಬನಾರಸ್ ಎಂದು ನಾಮಕರಣ ಮಾಡಲಾಗಿದೆಯಂತೆ.

ಇನ್ನು ದೊಡ್ಡ ನಟನಾಗಬೇಕೆನ್ನುವ ಕನಸಿನಿಂದ ಚಿತ್ರರಂಗಕ್ಕೆ ಬಂದಿರುವ ಜಾಹಿದ್ ‘ಬನಾರಸ್ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸುತ್ತಿದ್ದು, ಪಂಚತಂತ್ರ ಚಿತ್ರದಲ್ಲಿ ಅಭಿನಯಿಸಿ ಕ್ಯೂಟ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ಸೋನಾಲ್ ಜಾಹಿದ್ ಗೆ ಜೋಡಿಯಾಗಿ ಬನಾರಸ್ ಚಿತ್ರದಲ್ಲಿ ಬಣ್ಣಹಚ್ಚಲಿದರಂತೆ.


ತುಳು ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ಸೋನಲ್ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಮಟ್ಟದಲ್ಲಿ ಸುದ್ದಿಯಾಗಿದ್ದು, ಸದ್ಯ ಸ್ಯಾಂಡಲ್ ವುಡ್ ನಲ್ಲಿ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇನ್ನೂ ಹಲವು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸೋನಾಲ್ ಮಧ್ಯೆ ಬನಾರಸ್ ಚಿತ್ರದಲ್ಲಿಯೂ ಅಭಿನಯಿಸಲು ಒಪ್ಪಿಕೊಂಡಿದ್ದಾರಂತೆ.

ಈಗಾಗಲೇ ಚಿತ್ರವನ್ನು ಚಿತ್ರೀಕರಿಸಲು ಲೊಕೇಶನ್ ಗಾಗಿ ವಾರಣಾಸಿ ಪ್ರವಾಸ ಮಾಡಿರುವ ನಿರ್ದೇಶಕಜಯತೀರ್ಥ. ಸುಮಾರು ಒಂದು ತಿಂಗಳ ಕಾಲ ವಾರಣಾಸಿಯಲ್ಲಿ ಚಿತ್ರವನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ, ಇನ್ನೂ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಒಂದು ತಿಂಗಳ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ನಂತರ ದೊಡ್ಡ ಮಟ್ಟಕ್ಕೆ ಅಧಿಕೃತವಾಗಿ ಚಿತ್ರದ ಟೈಟಲ್, ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಲಾಂಚ್ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

Sponsored :


9900071610