ಕೇದಾರನಾಥಕ್ಕೆ ನಮೋ ಭೇಟಿ, ಮೋದಿ ಅಲ್ಲಿ ಮಾಡಿದ ವಿಶಿಷ್ಟ ಕಾರ್ಯ ಏನು..? – ಇಂದು ಅವರ ವಾಸ್ತವ್ಯ ಎಲ್ಲಿ ಗೊತ್ತಾ?

1794

ದೇಶದಲ್ಲಿ ಆರು ಹಂತಗಳಲ್ಲಿ ನಡೆದ ಚುನಾವಣೆಗಳ ಅಬ್ಬರ ಶಾಂತವಾಗಿದೆ. ರಾಜಕೀಯ ನಾಯಕರ ಬತ್ತಳಿಕೆಯಲ್ಲಿದ್ದ ಆರೋಪ-ಪ್ರತ್ಯಾರೋಪಗಳ ಅಸ್ತ್ರಗಳೆಲ್ಲವೂ ಖಾಲಿಯಾಗಿವೆ.. ಸದ್ಯ ಉಳಿದಿರೋದು ಏಳನೇ ಹಂತದ ಮತದಾನವಷ್ಟೇ.. ಈ ಏಳು ಹಂತಗಳ ಮತದಾನಗಳಲ್ಲಿ ಏಳಿಗೆಯಾಗೋದು ಯಾರು ಅನ್ನೋದಷ್ಟೇ ಈಗ ಆಗ್ತಿರೋ ಚರ್ಚೆ.. ಈ ಕೂಡಿ ಕಳೆವ ಲೆಕ್ಕಾಚಾರಗಳ ಚರ್ಚೆಯಲ್ಲೇ ರಾಜಕೀಯ ಪಕ್ಷಗಳು ಮುಳುಗಿವೆ. ಆದ್ರೆ ಇಂಥ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಗವಂತ ಮೊರೆ ಹೋಗಿದ್ದಾರೆ..


ಹಿಮಾಲಯದ ತಪ್ಪಲು..ಬಿರು ಬೇಸಿಗೆಯಲ್ಲೂ ಒಂದಷ್ಟು ಚಳಿ ಅನ್ನುವಷ್ಟು ತಣ್ಣನೆಯ ವಾತವರಣ.. ಇಲ್ಲೇ ನೆಲೆಯಾಗಿದ್ದಾನೆ.. ಜಗತ್ತನ್ನೇ ಕಾಯೋ ಜಗದೀಶ್ವರ..ಇಂಥ ಪರಮಾತ್ಮನ ಸನ್ನಿಧಿಯಲ್ಲಿ ಈಗ ಮೋದಿ ಬಂದು ನಿಂತಿದ್ದಾರೆ..

ad

 

ಮನಸ್ಸಿನ ತುಂಬಾ ಭಕ್ತಿ ಭಾವ..ಮೈ ಮೇಲೆ ಉತ್ತರಖಾಂಡ್ ಜನರು ಧರಿಸೋ ಸಾಂಪ್ರಾದಾಯಿಕ ಉಡುಗೆ..ನಾನು ಅನ್ನೋದನ್ನ ಮರೆತು ಎಲ್ಲವೂ ನೀನೇ.. ನಿನ್ನದೇ ಎಲ್ಲ.. ನಿೀನಿಲ್ಲದೇ ನಾನಿಲ್ಲ ಅಂತ ಭಗವಂತನ ಮುಂದೆ ನಿಂತಿರೋ ಮೋದಿ..

Sponsored :

Related Articles