ಮೋದಿ ಪ್ರಧಾನಿಯಾಗಲ್ಲ- ರಾಹುಲ್​​ಗೂ ಪ್ರಧಾನಿ ಪಟ್ಟ ದಕ್ಕಲ್ಲ- ಹೀಗಂತ ಭವಿಷ್ಯ ನುಡಿದವರ್ಯಾರು ಗೊತ್ತಾ?

13681

2019ರಲ್ಲಿ ಮೋದಿ ಮತ್ತೊಮ್ಮೆ ಅನ್ನೋ ಆಸೆ ಈಡೇರಲ್ವಾ..? ಈ ಬಾರಿಯೂ ರಾಹುಲ್ ಗಾಂಧಿಗೆ ದಕ್ಕೋದೇ ಇಲ್ವಾ ಪ್ರಧಾನಿ ಪಟ್ಟ.? ಮೋದಿ-ರಾಹುಲ್​​​ ಅಲ್ಲದೇ ಮೂರನೇ ವ್ಯಕ್ತಿಗೆ ಸಿಗುತ್ತಾ ಪ್ರಧಾನಿ ಪಟ್ಟ..? ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕಿರೋದು ಮತ್ಯಾರು ಅಲ್ಲ ಯುಗಾದಿಯಂದು ಸ್ಪೋಟಕ ಭವಿಷ್ಯ ನುಡಿಯುವ ಇಲಾಳ ಮ್ಯಾಳದವರು.


ಹೌದು ಬಾಲಗಕೋಟೆಯ ಗುಳೇದಗುಡ್ಡದಲ್ಲಿರುವ ಇಲಾಳ ಮ್ಯಾಳದವರು ಪ್ರತಿ ಯುಗಾದಿಯಂದು ಪೂಜೆ ಸಲ್ಲಿಸಿದ ಬಳಿಕ ಭವಿಷ್ಯ ನುಡಿಯುವುದು ವಾಡಿಕೆ. ಇಂದು ಕೂಡ ವಾಡಿಕೆಯಂತೆ ಯುಗಾದಿ ಭವಿಷ್ಯ ನುಡಿದಿದ್ದು, ಮಳೆ,ಬೆಳೆ,ವ್ಯಾಪಾರ ವಹಿವಾಟು ಸೇರಿ ರಾಜಕೀಯದ ಬಗ್ಗೆನೂ ರಾಜಕೀಯ ಭವಿಷ್ಯ ನುಡಿಯುತ್ತಾರೆ. ಇಂದೂ ಕೂಡ ಯುಗಾದಿಯಂದು ಭವಿಷ್ಯ ನುಡಿದಿದ್ದಾರೆ. ಅದರಲ್ಲಿ ರಾಜಕೀಯ ಭವಿಷ್ಯ ಇದೀಗ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ad

ಇಲಾಳ ಮ್ಯಾಳದವರ ಭವಿಷ್ಯದ ಪ್ರಕಾರ ಈ ಸಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ಪ್ರಧಾನಿಯಾಗುವ ಯೋಗ ಇಲ್ವಂತೆ. ಇವರಿಬ್ಬರನ್ನು ಹೊರತುಪಡಿಸಿದ ಮೂರನೇ ವ್ಯಕ್ತಿಗೆ ಪ್ರಧಾನಿ ಪಟ್ಟ ಒಲಿಯುತ್ತದೆ ಎಂದು ಭವಿಷ್ಯ ನುಡಿದಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗುವ ಯೋಗ ಶೇ 67 ರಷ್ಟಿದ್ದರೇ, ರಾಹುಲ್ ಗಾಂಧಿ ಪ್ರಧಾನಿಯಾಗುವ ಯೋಗ ಕೇವಲ 47 ಶೇಕಡಾದಷ್ಟಿದೆಯಂತೆ. ಇನ್ನು ಇವರಿಬ್ಬರ ಪ್ರಧಾನಿ ಕನಸಿಗೆ ದೇವರೆ ಉತ್ತರ ಎಂದಿರುವ ಭವಿಷ್ಯವಾಣಿ, ರಾಹುಲ್ ಗಾಂಧಿ ಪ್ರಧಾನಿಯಾಗಲು ಮಹಾಕಾಳಿ ದರ್ಶನ ಪಡೆಯಬೇಕೆಂದು ಸೂಚಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಲು ಸುಬ್ರಹ್ಮಣ್ಯನ ದರ್ಶನ ಪಡೆಯಬೇಕೆಂದು ಸೂಚಿಸಿದೆ.


ಇನ್ನು ದೇಶದಲ್ಲಿ ನಡೆಯುವ 7 ಹಂತದ ಚುನಾವಣೆ ಬಗ್ಗೆಯೂ ಭವಿಷ್ಯ ನುಡಿದಿರುವ ಇಲಾಳ ಮ್ಯಾಳದವರು, ಏಳು ಹಂತಗಳ ಚುನಾವಣೆಯಲ್ಲಿ ಮೂರು ಹಂತ ಹಿಂಸಾತ್ಮಕವಾಗಿರುತ್ತೆ. ಇದರಲ್ಲಿ ಒಂದರಿಂದ ನಾಲ್ಕು ಹಂತದಲ್ಲಿ ಮತದಾನ ಸುಗಮವಾಗಿ ಸಾಗುತ್ತವೆ. ಐದು ಮತ್ತು ಏಳನೇ ಹಂತದ ಮತದಾನಗಳು ಕೆಟ್ಟ ಗಳಿಗೆಯನ್ನು ತರುತ್ತವೆ. ಎಂಪಿಗಳು ತಮ್ಮ ವೈಯಕ್ತಿಕ ನಿರ್ಧಾರ ತೆಗೆದುಕೊಳ್ತಾರೆ. ಯಾರು ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರೋದಿಲ್ಲ ಎಂದು ಭವಿಷ್ಯ ನುಡಿದಿದೆ.

Sponsored :

Related Articles