ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಮೋದಿ ಟ್ವೀಟ್​ ವಿಶ್​​! ಇಷ್ಟಕ್ಕೂ ಟ್ವೀಟ್​ನಲ್ಲಿ ಏನಂದ್ರ ಗೊತ್ತಾ ನಮೋ?!

1125

ಸಂಸತ್​​​ ಸಮರದಲ್ಲಿ ಗೆದ್ದ ನರೇಂದ್ರ ಮೋದಿಯವರಿಗೆ ಎಲ್ಲ ಕ್ಷೇತ್ರದಿಂದಲೂ ಶುಭಾಶಯಗಳ ಸುರಿಮಳೆಯೇ ಹರಿದುಬಂದಿತ್ತು. ಇದಕ್ಕೆ ಭಾರತ ಕ್ರಿಕೆಟ್​ ಟೀಂ ಕ್ಯಾಪ್ಟನ್​ ವಿರಾಟ್ ಕೊಹ್ಲಿ ಕೂಡ ಹೊರತಲ್ಲ. ಮೋದಿ ಗೆಲುವಿಗೆ ಶುಭ ಕೋರಿದ್ದ ಕೊಹ್ಲಿಗೆ ಈಗ ಮೋದಿ ವಿಶ್ ಮಾಡಿದ್ದು, ವಿಶ್ವಕಪ್​ಗೆ ಶುಭ ಹಾರೈಸಿದ್ದಾರೆ.


ಚುನಾವಣಾ ಫಲಿತಾಂಶ ಪ್ರಕಟವಾದ ದಿನ ವಿರಾಟ್​ ಕೊಹ್ಲಿ ಪ್ರಧಾನಿ ಮೋದಿಗೆ ಟ್ವೀಟ್​ ಮಾಡಿ ನಿಮ್ಮ ನಾಯಕತ್ವದಲ್ಲಿ ಭಾರತ ಉತ್ತುಂಗಕ್ಕೆ ಹೋಗಲಿ ಎಂದು ವಿಶ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇವತ್ತು ಟ್ವೀಟ್ ಮಾಡಿದ ಮೋದಿ ಕ್ರಿಕೆಟ್​ ವಿಶ್ವಕಪ್​ನಲ್ಲಿ ನಿಮಗೆ ಶುಭಾರಂಭ ಸಿಗಲಿ ಎಂದು ಶುಭ ಕೋರಿದ್ದಾರೆ.

ad


ವಿಶ್ವಕಪ್​ನಲ್ಲಿ ಗೆದ್ದು ಬನ್ನಿ ಎಂದು ಮೋದಿ ಹರಸಿದ್ದಾರೆ. ಇವತ್ತಿನಿಂದ ಭಾರತ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದ್ದು ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದೆ.

Sponsored :

Related Articles