ಶ್ರಮವಿಲ್ಲದೇ ಪಲ್ಲಂಗ ಏರಿದೋರು ಯಾರಿಗೆ ಬೇಕಾದ್ರೂ ಹಂಗಿಸ್ತಾರೆ- ರಮ್ಯ ವಿರುದ್ಧ ಜಗ್ಗೇಶ್​ ಸ್ಟ್ರಾಂಗ್ ​ಟ್ವೀಟ್​ ವಾರ್!

1628
Modi v/s Ramya: actor Jaggesh Retweet On Ramya's Tweet
Modi v/s Ramya: actor Jaggesh Retweet On Ramya's Tweet

ಪ್ರಧಾನಿ ಮೋದಿಯವರ TOP ಪ್ರಿಯಾರಿಟಿ ರೈತರಲ್ಲ.

ad

ಅವರ ಪ್ರಿಯಾರಿಟಿ POT ಅಂತ ಮಾಜಿ ಸಂಸದೆ ರಮ್ಯ ಕುಹಕವಾಡಿದ್ದಾರೆ. ಆದ್ರೆ POT ಅಂದ್ರೆ ಗಾಂಜಾ ಅಂತ ಆರ್ಥ ಬರುತ್ತದೆ. ರಮ್ಯ POT ಅಂತ ಪ್ರಧಾನಿ ಮೋದಿಗೆ ಹೇಳಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ರಾಜ್ಯದಾದ್ಯಂತ ರಮ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ಸಿಲಿಕಾನ ಸಿಟಿಯ ಅರಮನೆ ಮೈದಾನದಲ್ಲಿ ಪರಿವರ್ತನಾ ರ್ಯಾಲಿ ಸಮಾರೋಪದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ರೈತರು ನನ್ನ TOP ಪ್ರಿಯಾರಿಟಿ ಅಂತ ಅಂದಿದ್ರು. TOP ಅಂದ್ರೆ ಟೊಮ್ಯಾಟೊ, ಆನಿಯನ್​, ಪೊಟ್ಯಾಟೊ ಅಂತ ಪ್ರಧಾನಿ ಮೋದಿ ಹೇಳಿದ್ರು. ಆದ್ರೆ ರಮ್ಯ ಪ್ರಧಾನಿಯ ಪ್ರಯಾರಿಟಿ POT ಅಂತ ಟ್ವಿಟರ್​ನಲ್ಲಿ ಕುಹಕವಾಡಿದ್ದರು.

 

ಇದಕ್ಕೆ ಹಿರಿಯ ನಟ ಹಾಗೂ ಬಿಜೆಪಿಗ ಜಗ್ಗೇಶ್​, ಟ್ವಿಟ್​​ ಮೂಲಕ ಸಖತ್​ ಉತ್ತರ ನೀಡಿದ್ದು, ಸ್ಟಾರ್ ಹೊಟೇಲ್​​ನಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ. ಪ್ರತಿಚಿತ್ರದ ಕ್ಯಾಚ್ಗೆ ಅದೆ ಸ್ಟಾರ್ ಹೋಟಲ್ ಪಾರ್ಟಿ ಕೊಟ್ಟುದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್ ಮಾಡಿ. ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ಗಾಂಧಿ ಆದರೇನು ಯಾರಿಗೆ ಬೇಕಾದರು ಹಂಗಿಸುತ್ತಾರೆ ಯಾಕಂದ್ರೆ ಅವರು, ಕಾರಣ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ! ಎಂದಿದ್ದಾರೆ.  ಇನ್ನು, ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಸ್ವಾಗತಿಸಲು ತೆರಳದ ಸಿಎಂ ಸಿದ್ದರಾಮಯ್ಯರನ್ನ ಬಿಜೆಪಿಗರು ಕಾಲೆಳೆದಿದ್ದಾರೆ. ಶಾಸಕ ಸುರೇಶ್​​ ಕುಮಾರ್​​ ಟ್ವೀಟ್​ ಮಾಡಿ ಶಿಷ್ಟಾಚಾರದ ಮೂಢನಂಬಿಕೆಯ ವಿರೋಧಿ ಎಂದು ಸಿದ್ದರಾಮಯ್ಯ ರುಜುವಾತು ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಇದಲ್ಲದೇ ಜಗದೀಶ್​ ಶೆಟ್ಟರ್​, ಕೇಂದ್ರ ಸಚಿವ ಸದಾನಂದ ಗೌಡ್​ ,ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ರಮ್ಯ ವಿರುದ್ಧ ಹರಿಹಾಯ್ದಿದ್ದಾರೆ.

Sponsored :

Related Articles