ಪ್ರಮಾಣವಚನದ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ! ಸಮಾರಂಭಕ್ಕೆ ಗೈರಾಗಿ ಬಂಡಾಯದ ಬಾವುಟ ಹಾರಿಸಿದ 10ಕ್ಕೂ ಹೆಚ್ಚು ಶಾಸಕರು!!

1654

ಒಂದೆಡೆ ಬಿಎಸ್​​ವೈ ಸಚಿವ ಸಂಪುಟ ರಚನೆಯಾಗಿ 17 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರೇ, ಇತ್ತ ಬಿಜೆಪಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಬಿಜೆಪಿಯ ಹಲವು ಶಾಸಕರು ಬಿಎಸ್​ವೈ ವಿರುದ್ಧ ಗರಂ ಆಗಿದ್ದು, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗುವ ಮೂಲಕ ಅಸಮಧಾನ ಬಹಿರಂಗಪಡಿಸಿದ್ದಾರೆ.


ಹೌದು ಇಂದು ರಾಜಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭಕ್ಕೆ ಹಲವು ಬಿಜೆಪಿ ಶಾಸಕರು ಗೈರಾಗಿದ್ದು ಆ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹಲವರ ಹೆಸರು ರಾತ್ರಿಯವರೆಗೂ ಪಟ್ಟಿಯಲ್ಲಿ ಇತ್ತು ಎನ್ನಲಾಗಿದ್ದು, ಬೆಳಗಾಗುವ ವೇಳೆ ನಾಪತ್ತೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ad

ಮೈಸೂರು ಶಾಸಕ ರಾಮದಾಸ, ಬಿಎಸ್ವೈ ಮಾನಸಪುತ್ರ ರೇಣುಕಾಚಾರ್ಯ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ,ತಿಪ್ಪಾರೆಡ್ಡಿ,ಮುರುಗೇಶ್ ನಿರಾಣಿ, ಕೆ.ಜಿ.ಬೋಪಯ್ಯ, ಸಿ.ಪಿ.ಯೋಗೇಶ್ವರ್,ಬಸನಗೌಡ ಪಾಟೀಲ್ ಯತ್ನಾಳ್, ಶಾಸಕಿ ಪೂರ್ಣಿಮಾ, ಎಸ್.ಅಂಗಾರ ಸೇರಿದಂತೆ ಹಲವು ನಾಯಕರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದು, ತಮಗೆ ಸಚಿವ ಸ್ಥಾನ ಸಿಗದೇ ಇರೋದಿಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಲವೆಡೆ ಬಿಜೆಪಿ ಶಾಸಕರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ ಆರಂಭವಾಗಲಿದ್ದು, ಸಚಿವ ಸ್ಥಾನಕ್ಕೆ ಒತ್ತಡ ಹೇರಲು ಆರಂಭಿಸಿದ್ದಾರೆ.

Sponsored :

Related Articles