ತಂದೆಯ ಅನೈತಿಕ ಸಂಬಂಧಕ್ಕೆ ತಾಯಿ, ಮಕ್ಕಳು ಬಲಿ! ವಾಟ್ಸಪ್​​ನಲ್ಲಿ ಸ್ಟೇಟಸ್​ ಹಾಕಿ ನೇಣಿಗೆ ಕೊರಳೊಡ್ಡಿದ ಪುತ್ರಿಯರು!!

10035
9900071610

ಸಾವಿನ ಕಾರಣವನ್ನ ವಾಟ್ಸಾಪ್ ಸ್ಟೇಟಸ್ ಗೆ ಹಾಕಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ತಂದೆಯ ಅನೈತಿಕ ಸಂಬಂಧ ಬಾಳಿಬದುಕಬೇಕಿದ್ದ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಬಲಿಪಡೆದಿದೆ.

ad

ರಾಜೇಶ್ವರಿ, ಮಾನಸ ಹಾಗೂ ಭೂಮಿಕಾ ಮೃತ ದುರ್ದೈವಿಗಳು. ಮೂವರು ಹನುಮಂತನಗರ ಠಾಣಾ ವ್ಯಾಪ್ತಿಯ ಶ್ರೀನಗರ ನಿವಾಸಿಗಳು. ತಮ್ಮ ತಂದೆಯ ವರ್ತನೆಯಿಂದ ಬೇಸತ್ತಿರುವುದಾಗಿ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವ ಮಕ್ಕಳು ತಮ್ಮ ಅಮ್ಮನ ಒಟ್ಟಿಗೆ ಕಳೆದ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ

ಮೃತ ರಾಜೇಶ್ವರಿ ಶ್ರಿನಗರ ನಿವಾಸಿ ಸಿದ್ದಯ್ಯ ಎಂಬುವರನ್ನ ಮದುವೆಯಾಗಿದ್ದರು. ಇವರಿಗೆ ಭೂಮಿಕಾ ಹಾಗೂ ಮಾನಸ ಇಬ್ಬರು ಮಕ್ಕಳಿದ್ದರು. ಕೆ.ಇ.ಬಿ ಯಲ್ಲಿ ವಾಚ್ ಮ್ಯಾನ್ ಆಗಿದ್ದ ಸಿದ್ದಯ್ಯ ಪರಸಂಗಕ್ಕೆ ಬಿದ್ದಿದ್ದ. ಇದ್ರಿಂದಾಗಿ ಮನೆಯಲ್ಲಿ ಪ್ರತಿನಿತ್ಯವು ಜಗಳವಾಗ್ತಾ ಇತ್ತು. ಇದ್ರಿಂದ ಬೇಸತ್ತು ಮೂವರು ಕಳೆದ ರಾತ್ರಿ ಮೂವರು ನೇಣಿಗೆ ಶರಣಾಗಿದ್ದಾರೆ.

ಇತ್ತ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು ತಂದೆ ಸಿದ್ದಯ್ಯ ಮಾತ್ರ ಯಾರದೋ ಜೊತೆ ಕನ್ಯಕುಮಾರಿಗೆ ಟ್ರಿಪ್ ಹೋಗಿದ್ದಾನೆ. ಈಗಾಗಲೆ ಪೊಲೀಸ್ರು ಸಿದ್ದಯ್ಯನಿಗೆ ವಿಷಯ ತಿಳಿಸಿದ್ದಾರೆ. ಆದರೆ ಮೃತ ರಾಜೇಶ್ವರಿ ಪೋಷಕರು ಮಾತ್ರ ಸಿದ್ದಯ್ಯನೆ ಕಾರಣ ಎಂದು ಪೊಲೀಸ್ರಿಗೆ ದೂರು ನೀಡಿದ್ದು ಹನುಮಂತನಗರ ಪೊಲೀಸ್ರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಾ ಇದ್ದಾರೆ

Sponsored :


9900071610